ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ

teachers
ಕೂಡ್ಲಿಗಿಯಲ್ಲಿ ಡಾ.ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮೆರವಣಿಗೆಗೆ ಚಾಲನೆ ನೀಡಿದರು. ತಾಪಂ ಇಒ ವೈ. ರವಿಕುಮಾರ್, ಬಿಇಒ ಪದ್ಮನಾಭ ಕಣರ್ಂ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಬಿ.ಶಿವಾನಂದ, ಪ್ರಮುಖರಾದ ಎಸ್.ವಿ.ಸಿದ್ದಾರಾಧ್ಯ, ಕೆ.ಜಿನಾಬಿ, ಗೀತಾ,ಎಚ್.ಇಂದಿರಾ, ಜಗದೀಶ ಇತರರಿದ್ದರು.
Published on

ಕೂಡ್ಲಿಗಿ: ಶಿಕ್ಷಕರು ಸುಸಂಸ್ಕೃತ ಸಮಾಜದ ನಿರ್ಮಾತೃಗಳು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಆಯೋಜಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಜ್ಯೋತಿ ಬೆಳಗುವ ಮೂಲಕ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದಲ್ಲಿ ಪ್ರಬಲ ಪಾತ್ರ ವಹಿಸುವುದು ಶಿಕ್ಷಕರು ಎಂಬುದನ್ನು ನಾವು ಮರೆಯುವ ಹಾಗಿಲ್ಲ. ಸಾಮಾಜಿಕ ಚಿಂತನೆ, ಕಳಕಳಿ ಹೊಂದಿರುವವರೇ ಉತ್ತಮ ಶಿಕ್ಷಕರು.

ವಿಶೇಷವಾದ ಗೌರವ

ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅತೀ ಮುಖ್ಯವಾಗಿದೆ. ನಾವು ಇಂದು ವಿದ್ಯಾರ್ಥಿಗಳಾಗಿರಬಹುದು. ಆದರೆ ಮುಂದೆ ಸಮಾಜದಲ್ಲಿ ಪ್ರತಿಯೊಬ್ಬರೂ ಒಂದೊಂದು ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬಹುದು. ದೇಶದ ಸೇವೆ ಸಲ್ಲಿಸಬಹುದು. ಅದಕ್ಕೆ ಮುನ್ನುಡಿ ಬರೆಯುತ್ತಿರುವವರು, ನಮ್ಮನ್ನು ತಿದ್ದುತ್ತಿರುವವರು, ಹೊಸ ಹೊಸ ವಿಷಯಗಳನ್ನು ತಿಳಿಸಿ ಕಲಿಸುತ್ತಿರುವವರು ಶಿಕ್ಷಕರೇ. ಆದ್ದರಿಂದ ಶಿಕ್ಷಕರ ಸ್ಥಾನಕ್ಕೆ ಅಷ್ಟೊಂದು ಮಹತ್ವ ಇದೆ. ಶಿಕ್ಷಕ, ವೈದ್ಯ ಹಾಗೂ ಯೋಧರಿಗೆ ವಿಶೇಷವಾದ ಗೌರವವಿದೆ ಈ ಮೂವರು ಸಮಾಜದ ಆಸ್ತಿಗಳು ಎಂದು ಬಣ್ಣಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಿ.ಕೊಟ್ರಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜಿನೇಯ, ಶಿಕ್ಷಣ ಸಂಯೋಜಕ ಜಗದೀಶ, ಕೆ.ಜಿನಾಬಿ, ಪಪಂ ಸದಸ್ಯರಾದ ಕಾವಲಿ ಶಿವಪ್ಪನಾಯಕ, ಮುಖಂಡರಾದ ಡಿ.ಎಚ್.ದುರುಗೇಶ, ಢಾಣಿ ರಾಘವೇಂದ್ರ, ಜಿ.ಬಸವರಾಜ, ಕಸಾಪ ತಾಲೂಕು ಅಧ್ಯಕ್ಷ ವೀರೇಶ ಅಂಗಡಿ, ಸಾವಜ್ಜಿ ರಾಜೇಂದ್ರ, ಜಿ. ಓಬಣ್ಣ ಇತರರಿದ್ದರು.

ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು. ಜಿಲ್ಲಾ ಹಾಗೂ ತಾಲೂಕು ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಿಂದ ಡಾ.ಎಸ್. ರಾಧಾಕೃಷನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net