

ಮೂಡಲಗಿ: ಸಂವಿಧಾನದ ಚೌಕಟ್ಟಿನಲ್ಲಿ ನೀಡಲಾಗಿರುವ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸದಢ ಭಾರತ ಕಟ್ಟಲು ಶ್ರಮಿಸಬೇಕು ಎಂದು ಎಸ್‌ಎಸ್‌ಆರ್ ಪ್ರೌಢಶಾಲೆ ಉಪಪ್ರಾಚಾರ್ಯ ಬಿ.ಕೆ. ಕಾಡಪ್ಪಗೋಳ ಹೇಳಿದರು.
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಆರ್ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕ ಚಂದ್ರು ಮೋಟೆಪ್ಪಗೋಳ ಮಾತನಾಡಿ, ಭಾರತೀಯ ಸಂವಿಧಾನವು ಆಶಯದಂತೆ ಕಾನೂನಿನ ಚೌಕಟ್ಟು ರೂಪಿಸಲಾಗುತ್ತದೆ. ನಮ್ಮ ಸುರಕ್ಷಿತ ಜೀವನದ ಪವಿತ್ರ ಗ್ರಂಥ ಸಂವಿಧಾನ ಎಂದು ತಿಳಿಸಿದರು.
ಶಿಕ್ಷಕರಾದ ಎಸ್.ಎಸ್. ಕುರಣೆ, ಎಸ್.ಆರ್. ಗಲಗಲಿ, ರಮೇಶ ಬಿರಾದಾರ, ಹೇಮಾ ಢವಳೇಶ್ವರ, ರವಿ ಹೊಸಟ್ಟಿ, ವೀಣಾ ಸರಿಕರ, ಕವಿತಾ ಬಾರಡ್ಡಿ, ಜ್ಯೋತಿ ಬಂಡಿವಡ್ಡರ ಇತರರಿದ್ದರು.