

ಜನ್ನಾಡಿ: ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ದೇವರಿಗೆ ದೃಢ ಸಂಪ್ರೋಕ್ಷಣೆ ಮತ್ತು ದ್ರವ್ಯ ಕಲಶಾಭಿಷೇಕ ಸೇವೆ ನಡೆಯಿತು.
ಹಾಲಾಡಿ ದಿ.ರಾಮಚಂದ್ರ ಕಿಣಿ ಸ್ಮರಣಾರ್ಥ ಅವರ ಮರಿಮಕ್ಕಳು ಸೇವಾರೂಪವಾಗಿ ನಿರ್ಮಿಸಿಕೊಟ್ಟಿರುವ ಸ್ವಾಗತ ಗೋಪುರವನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಜೋಯಿಸ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಾಲಾಡಿ ಕಿಣಿ ಕುಟುಂಬದ ಅಣ್ಣಯ್ಯ ಕಿಣಿ, ಮುರಳೀಧರ ಕಿಣಿ, ವಸಂತ ಕಿಣಿ, ರಾಮಚಂದ್ರ ಕಿಣಿ ಲೋಕಾರ್ಪಣೆ ಮಾಡಿದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶೇಖರ ಶೆಟ್ಟಿ, ಗೌರವ ಉಪಾಧ್ಯಕ್ಷ ಎಂ.ವಿವೇಕ ಮಿತ್ಯಾಂತ, ಅರ್ಚಕ ಭಾಸ್ಕರ ಅಡಿಗ, ಹಾಲಾಡಿ ನರೇಶ್ ರಾಮದಾಸ ಕಿಣಿ, ಲೆಕ್ಕ ಪರಿಶೋಧಕ ಅರುಣ್ ಶೆಟ್ಟಿ ಜವಳಿಜಡ್ಡು, ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ದಿನಕರ ತೋಳಾರ್ ಮತ್ತು ಸದಸ್ಯರು, ಪ್ರಮುಖರಾದ ಸುಧಾಕರ ಶೆಟ್ಟಿ, ಎಂ.ಸುಧೀರ್ ರಾವ್, ದೀಪಕ್ ಶೆಟ್ಟಿ, ವಿದ್ಯಾನಂದ ಮಿತ್ಯಾಂತ, ರಮೇಶ ಭಟ್, ಅಕ್ಷಯ ಅಡಿಗ, ರವೀಂದ್ರ ಶೆಟ್ಟಿ, ಕಿರಣ್‌ರಾಜ್ ಶೆಟ್ಟಿ, ಸುಬ್ರಹ್ಮಣ್ಯ ಆಚಾರ್ಯ, ಸಂತೋಷ ಶೆಟ್ಟಿ, ಹಾಲಾಡಿ, ಉಮೇಶ ಆಚಾರ್ಯ, ಶ್ರೀಕಾಂತ ಆಚಾರ್ಯ, ಶಂಕರ ಶೆಟ್ಟಿ, ಸುರೇಶ ಭಟ್, ನಾಗೇಶ ಹಾಲಾಡಿ, ಆನಂದ ಶೆಟ್ಟಿ, ರಾಮ ಕುಲಾಲ್, ಆದಿತ್ಯ ಅಡಿಗ, ಚಂದ್ರಶೇಖರ ಶೆಟ್ಟಿ, ರಾಘು ಆಟೋ, ಮೋಹನ್ ಜಮದಗ್ನಿ, ರಾಜೇಶ್ ನಾಯ್ಕ, ಗೌತಮ ಆಚಾರಿ ಮೊದಲಾದವರು ಉಪಸ್ಥಿತರಿದ್ದರು. ಸೂರ್ಯಪ್ರಕಾಶ ದಾಮ್ಲೆ ನಿರೂಪಿಸಿ, ವಂದಿಸಿದರು.