ಸದೃಢ ದೇಹಕ್ಕೆ ಕ್ರೀಡೆ ಸಹಕಾರಿ

28-DVD-1
ದೇವದುರ್ಗದಲ್ಲಿ ಆಯೋಜಿಸಿದ್ದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯನ್ನು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಉದ್ಘಾಟಿಸಿದರು. ಪಿಐ ಎಸ್.ಮಂಜುನಾಥ, ಟಿಎಚ್‌ಒ ಡಾ.ಬನದೇಶ್ವರ, ಸಂಚಾರಠಾಣೆ ಪಿಎಸ್‌ಐ ನಾರಾಯಣ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಇತರರಿದ್ದರು.
Published on

ದೇವದುರ್ಗ: ಕ್ರೀಡೆಯಿಂದ ದೈಹಿಕ ಮಾತ್ರವಲ್ಲ ಮಾನಸಿಕ ರೋಗಗಳು ದೂರವಾಗುತ್ತವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ ಹೇಳಿದರು.

ಪಟ್ಟಣದಲ್ಲಿ ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾನುವಾರ ಮಾತನಾಡಿದರು. ಶಿಕ್ಷಕರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಜೆಸ್ಕಾಂ ನೌಕರರು ಕೆಲಸದ ಒತ್ತಡದಿಂದ ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.

ಇವರ ಜತೆ ವರ್ಷವಿಡೀ ರಜೆವಿಲ್ಲದೆ ದುಡಿಯುವ ಪೊಲೀಸರು, ಆರೋಗ್ಯ ಇಲಾಖೆ ನೌಕರರು ಹಾಗೂ ಸಮಾಜದ ನಾಲ್ಕನೇ ಅಂಗದಂತೆ ಕೆಲಸ ಮಾಡುವ ಪತ್ರಕರ್ತರಿಗೆ ಮನೋರಂಜನೆ ನೀಡುವ ದೃಷ್ಟಿಯಿಂದ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಕ್ರೀಡಾಕೂಟದಲ್ಲಿ ಸೋಲುಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದರು.

ತಹಸೀಲ್ದಾರ್ ಚನ್ನಮಲಪ್ಪ ಘಂಟಿ, ಪಿಐ ಎಸ್.ಮಂಜುನಾಥ, ಟಿಎಚ್‌ಒ ಡಾ.ಬನದೇಶ್ವರ, ಸಂಚಾರ ಠಾಣೆ ಪಿಎಸ್‌ಐ ನಾರಾಯಣ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಹಾದೇವಪ್ಪಗೌಡ ಪಾಟೀಲ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಾಬುಅಲಿ ಕರಿಗುಡ್ಡ, ನೌಕರರಾದ ಅಭಿಷೇಕ ರೆಡ್ಡಿ, ವೀರೇಶ, ರಮೇಶ, ಸುರೇಶ, ಪ್ರಭುಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net