ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ

web1
ಪಾಲಬಾವಿ ಗ್ರಾಮದ ಶ್ರೀ ಭರಮಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಶೋಭಾ ಕುರಬೆಟ್ಟಿ, ಚಂದ್ರವ್ವ ಬಾಳಿಗಾರ, ಪದ್ಮಶ್ರೀ ಪಾಟೀಲ, ರಾಜಶ್ರೀ ಬಳಿಗಾರ, ಸಿ.ಬಿ.ಕುಲಿಗೋಡ ಇತರರು ಇದ್ದರು.
Published on

ಹಂದಿಗುಂದ: ಜಾತ್ರಾ ಉತ್ಸವಗಳು, ಪರಸ್ಪರ ಸ್ನೇಹ, ಪ್ರೀತಿ, ಬೆಸೆಯುವ ಕೊಂಡಿಗಳು. ಪಾಲಬಾವಿ ಗ್ರಾಮದ ಭರಮಲಿಂಗೇಶ್ವರ ದೇವರ ಜಾತ್ರೆಯಲ್ಲಿ ಭಾಗವಹಿಸಿದ್ದು ನನಗೆ ಖುಷಿ ತರಿಸಿದೆ.

ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಶ್ರಮಿಸುತ್ತೇನೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಕುಡಚಿ ಮತಕ್ಷೇತ್ರದ ಪಾಲಬಾವಿ ಗ್ರಾಮದ ಶ್ರೀ ಭರಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಪಾಲ್ಗೊಂಡು ದೇವರ ದರ್ಶನ ಪಡೆದು ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಶೋಭಾ ಕುರಬೆಟ್ಟಿ, ಮಹಿಳಾ ಸದಸ್ಯರಾದ ಚಂದ್ರವ್ವ ಬಾಳಿಗಾರ, ಪದ್ಮಶ್ರೀ ಪಾಟೀಲ, ರಾಜಶ್ರೀ ಬಳಿಗಾರ, ಬಿಸ್ಮಿಲ್ಲಾ ಕಾಗವಾಡ, ಗೀತಾ ಗಡಿಂಗ್ಲಜ, ಗ್ರಾಪಂ ಸದಸ್ಯ ಗುರುನಾಥ ಜುಂಝರವಾಡ, ಪರಪ್ಪ ಕರೋಶಿ, ರಾಮಪ್ಪ ತೇಗೂರ, ಜಿಪಂ ಮಾಜಿ ಸದಸ್ಯ ಡಾ.ಸಿ.ಬಿ.ಕುಲಿಗೋಡ, ಕಿಸಾನ್ ರಾಜ್ಯ ಘಟಕದ ಉಪಾಧ್ಯಕ್ಷ ದಸ್ತಗೀರ್ ಕಾಗವಾಡ, ಕಾಂಗ್ರೆಸ್ ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಅರ್ಜುನ ನಾಯಿಕವಾಡಿ, ಶಿವಪ್ಪ ಕಾಡಶೆಟ್ಟಿ, ಲಕ್ಷ್ಮಣ ಮೇತ್ರಿ, ಪಿಕೆಪಿಎಸ್ ಅಧ್ಯಕ್ಷ ಗುರು ಮರಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net