ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಬೆಳಗಲು ಶ್ರಮಿಸಿ

29 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿ ಮಗು ತನ್ನದೇ ಆದ ವಿಶಿಷ್ಟ ಪ್ರತಿಭೆ ಹೊಂದಿದ್ದು, ಅದನ್ನು ಗುರುತಿಸಿ ಅವರಲ್ಲಿನ ಪ್ರತಿಭೆ ಬೆಳಗಲು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಶ್ರಮಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಹೇಳಿದರು.
ನಗರದ ಸರ್ಕಾರಿ ಆರ್ಟ್​ ಗ್ಯಾಲರಿಯಲ್ಲಿ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ವತಿಯಿಂದ ಸರ್ಕಾರಿ ಆರ್ಟ್​ ಗ್ಯಾಲರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರ ಬೆಳಗಾವಿ ವಿಭಾಗ ಮಟ್ಟದ ಕಲಾಕೃತಿ ರಚನಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಹೊಂದಿರುವ ಚಿತ್ರಕಲೆ, ಸಾಹಿತ್ಯ, ಸಂಗೀತ, ಅಭಿನಯ ಮತ್ತು ಮಾತುಗಾರಿಕೆಯಂತಹ ವಿಭಿನ್ನ ಪ್ರತಿಭಾ ಕೌಶಲಗಳನ್ನು ಮುಕ್ತವಾಗಿ ಪ್ರೋತ್ಸಾಹಿಸಿ ಅವರ ಅಭಿವ್ಯಕ್ತಿಗೆ ವ್ಯಾಪಕ ಅವಕಾಶಗಳನ್ನು ಒದಗಿಸಬೇಕು ಎಂದರು.
ಶಿಬಿರದಲ್ಲಿ ಪಾಲ್ಗೊಂಡಿದ್ದ ವಿಜಯಪುರ, ಬಾಗಲಕೋಟ, ಬೆಳಗಾವಿ, ಧಾರವಾಡ, ಉತ್ತರಕನ್ನಡ, ಹಾವೇರಿ, ಗದಗ, ಚಿಕ್ಕೋಡಿ ಮತ್ತು ಶಿರಸಿ ಜಿಲ್ಲೆಗಳ 50 ಪ್ರೌಢ ಶಾಲೆಗಳ ಚಿತ್ರಕಲಾ ಶಿಕ್ಷಕರು ನಮ್ಮ ಶಾಲೆ-ನಮ್ಮ ಜವಾಬ್ದಾರಿ ಪ್ರಧಾನ ಆಶಯದ ಅಡಿ ವಿಭಿನ್ನ ಪರಿಕಲ್ಪನೆಗಳ ನೂರಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿ ಇಲಾಖೆಗೆ ಒಪ್ಪಿಸಿದರು.
ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಈಶ್ವರ ನಾಯಕ, ಎಸ್​.ಬಿ. ಬಿಂಗೇರಿ, ಬಸವರಾಜ ಬಡಿಗೇರ, ಸುಜಾತಾ ತಿಮ್ಮಾಪುರ, ಪಿ.ಆರ್​. ಬಾರಕೇರ, ಬಿ.ವೈ. ಭಜಂತ್ರಿ, ಚಿತ್ರಕಲಾ ಕಾಲೇಜಿನ ಮುಖ್ಯಸ್ಥ ಡಾ. ಬಸವರಾಜ ಕುರಿಯವರ ಪ್ರಮಾಣ ಪತ್ರ ವಿತರಿಸಿದರು. ಎಸ್​.ಎ. ಕೇಸರಿ, ಗುರುರಾಜ ಅಂಬೇಕರ, ರವಿ ಗೋಡಕೆ, ಗೋಪಾಲ ಚಲವಾದಿ, ವಿಜಯಕುಮಾರ ಶಿಂಗೆ, ಮಂಜು ಗೌಡರ, ಎಂ.ಬಿ. ಹುಬ್ಬಳ್ಳಿ, ನಾರಾಯಣ ಯರಗುಪ್ಪಿ, ಇರತರರು ಇದ್ದರು.
ಪ್ರವಿಣ ಬಿರಾದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net