ಮಕ್ಕಳ ಪ್ರತಿಭೆ ಗುರುತಿಸಲು ಶ್ರಮಿಸಿ

NYK PRATHIBE 30
Published on

ನಾಯಕನಹಟ್ಟಿ: ಅಭಿವ್ಯಕ್ತಿ ಮತ್ತು ಪ್ರದರ್ಶನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕಲಿಕೆಯ ಮುಖ್ಯ ಆಯಾಮಗಳಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಾಯಕನಹಟ್ಟಿ ಕ್ಲಸ್ಟರ್ ಪ್ರತಿಭಾ ಕಾರಂಜಿ-ಕಲೋತ್ಸವವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಗು ಕಲಿತಿರುವುದನ್ನು ಅಭಿವ್ಯಕ್ತ ಪಡಿಸುವುದು, ಪ್ರದರ್ಶನ ಮಾಡುವುದಕ್ಕೆ ಸರ್ಕಾರ ಇಂತಹ ವೇದಿಕೆಗಳನ್ನು ಸೃಷ್ಟಿ ಮಾಡುತ್ತದೆ. ಈ ಮೂಲಕ ಮಗುವಿನಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಶಿಕ್ಷಕರು ಶ್ರಮ ವಹಿಸಬೇಕು ಎಂದರು.

ಪ್ರತಿಯೊಬ್ಬರೂ ಪ್ರತಿಭೆ ಅಡಕವಾಗಿರುತ್ತದೆ. ಅದನ್ನು ಗುರುತಿಸಿ, ಹೊರತರುವ ಹೊಣೆಗಾರಿಕೆ ಪಾಲಕರು, ಶಿಕ್ಷಕರದ್ದಾಗಿರುತ್ತದೆ ಎಂದು ಹೇಳಿದರು.

ಪಪಂ ಸದಸ್ಯ ಸೈಯದ್ ಅನ್ವರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ತರಬೇತಿ ಪಡೆದ ಶಿಕ್ಷಕರಿದ್ದಾರೆ. ಅವರಿಗೆ ಸಮಾಜದ, ಪಾಲಕರ ಪ್ರೋತ್ಸಾಹ ಅಗತ್ಯ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್.ಮಾರುತೇಶ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದೇವರಾಜ್, ತಾಪಂ ಮಾಜಿ ಸದಸ್ಯ ಬಸವರಾಜ್, ಮುಖಂಡ ಜಾಕೀರ್, ಮುಖ್ಯಶಿಕ್ಷಕ ಪಿ.ಒ.ತಿಪ್ಪೇಸ್ವಾಮಿ, ಇಂದಿರಮ್ಮ ಮಾತನಾಡಿದರು.

ಪಪಂ ಸದಸ್ಯರಾದ ವಿನುತಾ, ಸರ್ವಮಂಗಳಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮದ್ದಿಹಳ್ಳಿ ಮಹಾಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಟಿ.ತಿಪ್ಪೇಸ್ವಾಮಿ, ಮುಖಂಡರಾದ ಬಸಪ್ಪನಾಯಕ, ಪ್ರಭುಸ್ವಾಮಿ, ಹೊಸಹಳ್ಳಿ ತಿಪ್ಪೇಸ್ವಾಮಿ, ಶಿಕ್ಷಣ ಸಂಯೋಜಕರಾದ ಈರಸ್ವಾಮಿ, ರವಿಶಂಕರ್, ತಿಪ್ಪೇಸ್ವಾಮಿ, ಆರ್.ಚಂದ್ರಣ್ಣ, ಆರ್.ಸದಾಶಿವಯ್ಯ, ಜಿ.ಟಿ.ಶಾಂತಕುಮಾರಿ, ಆರ್.ಈಶ್ವರಪ್ಪ, ಬಿ.ಎಚ್.ತಿಪ್ಪೇರುದ್ರಪ್ಪ, ಸುಮಲತಾ, ಇ.ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net