

ಚಿತ್ತಾಪುರ: ಯುವ ವಕೀಲರು ತಮ್ಮ ಕಕ್ಷಿದಾರರಿಗೆ ನಿಷ್ಪಕ್ಷಪತವಾಗಿ ನ್ಯಾಯ ಒದಗಿಸಲು ಶ್ರಮಿಸಬೇಕು. ಬಡ ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು.
ಸ್ಟೇಷನ್ ತಾಂಡಾದಲ್ಲಿ ಬಂಜಾರ ಗೆಳೆಯರ ಬಳಗದಿಂದ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಯುವ ವಕೀಲರಿಗೆ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಬಡ ಕಕ್ಷಿದಾರರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ತಿಳಿಸಿಕೊಡಬೇಕು. ಉತ್ತಮ ನ್ಯಾಯವಾದಿಗಳಾಗಿ ಬೆಳೆಯಿರಿ ಎಂದು ಹಾರೈಸಿದರು.
ಸುಗೂರಿ(ಕೆ)ನ ಶ್ರೀ ಚನ್ನರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ, ಹಿರಿಯ ನ್ಯಾಯವಾದಿ ಚಂದ್ರಶೇಖರ ಅವಂಟಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ಪ್ರಮುಖರಾದ ನಾಗರಾಜ ಹೂಗಾರ, ರವಿ ಸಾಹುಕಾರ, ಕೃಷ್ಣಪ್ಪ ಕಲ್ಲz್ದೆÃವರು, ಸೋಮಶೇಖರ ಕರದಾಳ, ತುಕಾರಾಮ ನಾಯಕ, ರಾಮ ನಾಯಕ, ಶಂಕರ ನಾಯಕ, ಪೋಮು ನಾಯಕ, ರವೀಂದ್ರ ನಾಯಕ, ಗೋಪಾಲ ರಾಠೋಡ್, ರವಿ ಕುಲಕರ್ಣಿ, ಛತ್ರು ಮಾಸ್ಟರ್, ಕರಿಂ ಸೇಠ್, ಸೈಯ್ಯದ್ ನಿಜಾಮುದ್ದೀನ್ ಚಿಸ್ತಿ, ಕಾಶೀನಾಥ ರಾಠೋಡ್, ಶಂಕರ ಚವ್ಹಾಣ್, ರವಿ ರಾಠೋಡ್, ವೆಂಕಟೇಶ ಚವ್ಹಾಣ್, ವಿಠ್ಠಲ್ ರಾಠೋಡ್, ನಾಗೇಂದ್ರ ರಾಠೋಡ್, ಚಂದರ ಚವ್ಹಾಣ್, ವಿನೋದ ಚವ್ಹಾಣ್, ಶಿವರಾಮ ಚವ್ಹಾಣ್ ಇತರರಿದ್ದರು.
ಯುವ ವಕೀಲರಾದ ಅಶ್ವತ್ಥರಾಮ ರಾಠೋಡ್, ಪ್ರಸಾದ ಅವಂಟಿ, ಸೈಯ್ಯದ್ ನಯಿಮೋದ್ದಿನ್ ಚಿಸ್ತಿ, ಸಿದ್ದರಾಜ ಹೂಗಾರ, ಗೀತಾ ಕಟ್ಟಿಮನಿ, ನಂದಿನಿ ಸೀರಿ, ಅರ್ಚನಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.