ಕ್ರಿಯಾಶೀಲ ಆಡಳಿತ ಮಂಡಳಿ ಆಯ್ಕೆಗೆ ಶ್ರಮಿಸಿ

Strive to elect an active governing body
ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಂದಿ ಸಹಕಾರಿ ಕಾರ್ಖಾನೆಯ ಚುನಾವಣೆ ಪ್ರಚಾರದಲ್ಲಿ ಷೇರುದಾರರ ಮನೆ ಮನೆಗೆ ತೆರಳಿ ಮತಯಾಚಿಸಲಾಯಿತು. ಅದೃಶ್ಯಪ್ಪ ದೇಸಾಯಿ, ಎಸ್.ಟಿ.ಪಾಟೀಲ ಇದ್ದರು.
Published on


ಬೀಳಗಿ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ವ್ಯವಸ್ಥೆ ಸರಿ ಇಲ್ಲ. ನಂದಿ ಉಳಿವಿಗೆ ಶ್ರಮಿಸುವ ಜೈನಾಪುರ ಕುಮಾರ ದೇಸಾಯಿ ಪೆನಲ್ ಆಯ್ಕೆ ಮಾಡುವ ಮೂಲಕ ಆರ್ಥಿಕ ಸಂಕಷ್ಟ ದೂರು ಮಾಡಿ ಎಂದು ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಮುತ್ತು (ಅದೃಶ್ಯಪ್ಪ) ವಾಸಣ್ಣ ದೇಸಾಯಿ ಮನವಿ ಮಾಡಿದರು.

ತಾಲೂಕಿನ ಗಲಗಲಿ ಗ್ರಾಮದಲ್ಲಿ ಗುರುವಾರ ನಂದಿ ಸಹಕಾರಿ ಕಾರ್ಖಾನೆಯ ಚುನಾವಣೆ ಪ್ರಚಾರದಲ್ಲಿ ಷೇರುದಾರರ ಮನೆ ಮನೆಗೆ ತೆರಳಿ ಮತಯಾಚಿಸಿ ಅವರು ಮಾತನಾಡಿದರು.

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಿ ಹಾಗೂ ಅಭಿವೃದ್ಧಿಗೊಳಿಸಿ ಎಂಬ ಅಭಿಯಾನ ಇದಾಗಿದೆ. ಕಾರ್ಖಾನೆ ಅಭಿವೃದ್ಧಿ ಹಾಗೂ ರೈತರ ಪರ ರೈತರೆ ನಿರ್ಧರಿಸಿದ ಪೆನಲ್ ಇದಾಗಿದೆ. ಸಹಕಾರಿ ಕ್ಷೇತ್ರದಲ್ಲಿ ನಂದಿ ಸಕ್ಕರೆ ಕಾರ್ಖಾನೆ ರಾಜ್ಯ ಮತ್ತು ರಾಷ್ಟ್ರದಲ್ಲಿ ತನ್ನದೇಯಾದ ಚಾಪು ಮೂಡಿಸಿದೆ. ಇಲ್ಲಿ ಚುನಾವಣೆ ಎನ್ನದೆ ರೈತರ ಉಜ್ವಲ ಭವಿಷ್ಯಕ್ಕಾಗಿ ಮತ್ತು ಸಮಗ್ರ ಅಭಿವೃದ್ಧಿಗಾಗಿ ಒಳ್ಳೆಯ ಹಾಗೂ ಕ್ರಿಯಾಶೀಲ ಪ್ರಾಮಾಣಿಕ ಆಡಳಿತ ಮಂಡಳಿ ಆಯ್ಕೆಗೆ ಎಲ್ಲ ಷೇರುದಾರರು ಮುಂದಾಗಬೇಕು ಎಂದರು.

ಮನಾಲಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಸ್.ಟಿ.ಪಾಟೀಲ ಮಾತನಾಡಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆರ್ಥಿಕ ಅಭಿವೃದ್ಧಿಗೆ ಹಾಗೂ ಅನ್ನದಾತರ ಅನುಕೂಲಕ್ಕೆ ರೈತರೇ ನಿರ್ಧರಿಸಿದ ಜೈನಾಪುರ ಕುಮಾರ ದೇಸಾಯಿ ಅವರ ಪೆನಲ್‌ಗೆ ಈ ಸಾರಿ ಆಶೀರ್ವಾದ ಮಾಡಬೇಕು. ಕಾರ್ಖಾನೆ ಆರ್ಥಿಕ ಸಂಕಷ್ಟದಲ್ಲಿ ಅದನ್ನು ರೈತರು ನಿರ್ಮಾಣ ಮಾಡುವ ಪರಿಸ್ಥಿತಿ ಇದೆ. ಈ ಸಾರಿ ನಂದಿ ಸಕ್ಕರೆ ಕಾರ್ಖಾನೆ ಚುನಾವಣೆಯನ್ನು ಜನರು ಕುತೂಹಲದಿಂದ ನೋಡುತ್ತಿದ್ದಾರೆ. ರೈತ ಪರ ಕಾರ್ಖಾನೆ ಅಭಿವೃದ್ಧಿಪರ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ ತಾಲೂಕಿನ ರಬಕವಿ, ಕೊಲ್ಲೂರ, ಮುಂಡುಗನೂರ ಗ್ರಾಮಗಳಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಪ್ರಯುಕ್ತ ಮತಯಾಚಿಸಿದರು.
ಈರಣಗೌಡ ನ್ಯಾಮಗೌಡರ, ಹನುಮಂತಗೌಡ ಕೋರಡ್ಡಿ, ದೊಡ್ಡಣ್ಣ ದೇಸಾಯಿ, ಸುರೇಂದ್ರ ನಾಯಕ, ಶಂಕರಗೌಡ ನ್ಯಾಮಗೌಡರ, ಲಚಪ್ಪ ಒಂಟಗೋಡಿ, ಶಿವಗಿರಿ ದಳವಾಯಿ, ಶಾಸಪ್ಪ ಕುಬಕಡ್ಡಿ, ವಿಶ್ವನಾಥ ಬಾಳಶೆಟ್ಟಿ, ರಾಜು ಹಿರೇಮಠ, ಪಪ್ಪು ಹಿರೇಮಠ, ವೆಂಕಟೇಶ ನಾಯಕ, ಸೋಮನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಮುಗಿಯಪ್ಪ ದೇವನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net