ಶೇ.100 ಸಾಕ್ಷರ ಜಿಲ್ಲೆಯಾಗಲು ಶ್ರಮ ವಹಿಸಿ

Saksharata dina
Published on

ಕಾರವಾರ: ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಶೇ.84 ರಷ್ಟು ಪ್ರಗತಿ ಸಾಧಿಸಿದ್ದು, ಇದನ್ನು ಶೇ.100 ರಷ್ಟು ಪ್ರಗತಿ ಸಾದಿಸಲು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಾಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಕ್ಕಪ್ಪ ಗೋಳ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಡಯಟ್ ಕುಮಟಾ ಮತ್ತು ಜಿಲ್ಲಾ ವಯಸ್ಕರ ಶಿಕ್ಷಣ ಕಾರ್ಯಾಲಯದಿಂದ ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆದ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಕ್ಷರತಾ ದ್ವಜಾರೋಹಣ ಹಾಗೂ ಜ್ಯೋತಿ ಬೆಳಗಿಸಿ ಮಾತನಾಡಿದರು.
ದೇಶ ಮತ್ತು ರಾಜ್ಯದಲ್ಲಿ ಶೈಕಣಿಕ, ವೈಜ್ಞಾನಿಕ ಇತರೆ ಕ್ಷೇತ್ರದಲ್ಲಿ ಆಗಾಧವಾದ ಸಾಧನೆ ತೋರಿದೆ.
ಆದರೆ,ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ನಿವಾಸಿಗಳಲ್ಲಿ ಸಾಕ್ಷರತ ಪ್ರಮಾಣವನ್ನು ಶೇ.100ರಷ್ಟು ಪ್ರಗತಿ ಸಾಧಿಸಲು ಎಲ್ಲರೂ ಒಟ್ಟಾಗಿ ಕಾರ್ಯೋನ್ಮುಖರಾಗುವುದರಿಂದ ದೇಶದ ಅಭಿವೃದ್ಧಿ ಮಾಡಬಹುದು ಎದರು.
ಅಲ್ಲದೆ, ನಿರುದ್ಯೋಗವನ್ನು ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ ಎಂದರು.

ಕುಮಟಾದ ಡಯಟ್ ಪ್ರಾಂಶುಪಾಲ ಎನ್.ಜಿ ನಾಯಕ ಮಾತನಾಡಿ, ಸಾಕ್ಷರತೆ ಎಂಬುವುದು ಮನುಷ್ಯನ ಘನತೆ ಮತ್ತು ಮಾನವ ಹಕ್ಕು ಆಗಿದೆ.
ಸಾಕ್ಷರತೆಯ ಅರಿವು ಜೊತೆಯಲ್ಲಿ ಆರ್ಥಿಕ ಸಾಕ್ಷರತೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಬೇಕು.


ಸರ್ಕಾರವು ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಅನೇಕ ಯೋಜನೆಗಳನ್ನು ರೂಪಿಸಿದೆ ಇದರ ಪ್ರಯೋಜನವನ್ನು ಪಡೆದುಕೊಂಡು ದೇಶದ ಅಭಿವೃದ್ಧಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಹಾಗೆಯೇ ಶಿಕ್ಷಣ ಪಡೆದವರು ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ನೀಡಿ ಸಾಕ್ಷರತೆ ಪ್ರಮಾಣ ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಜೆಲ್ಲೆಯ ನವಸಾಕ್ಷರರಿಗೆ, ನವಸಾಕ್ಷರರ ಪ್ರಮಾಣಪತ್ರ ವಿತರಿಸಲಾಯಿತು.
ಜಿಲ್ಲಾ ಶಿಕ್ಷಣ ವಯಸ್ಕರ ಶಿಕ್ಷಣಾಧಿಕಾರಿ ಉಮೇಶ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಹಾಸ್ ರಾಯ್ಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕಿ ಲತಾ ನಾಯ್ಕ, ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಮುಖ್ಯ ಯೋಜನಾಧಿಕಾರಿ ನಾಗರಾಜ ಗೌಡ, ಪದವಿ ಪೂರ್ವ ಕಾಲೇಜ್ ನ ಪ್ರಾಚಾರ್ಯ ವಿಠೋಬ ನಾಯ್ಕ, ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ನವೀನ ದೇವರಬಾವಿ ಮತ್ತಿತರು ಇದ್ದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಉಮೇಶ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ಚಂಪಾ ನಾಯ್ಕ ನಿರೂಪಿಸಿದರು, ಕುಮಟಾದ ಡಯಟ್ ಹಿರಿಯ ಉಪನ್ಯಾಸಕ ಜಿ. ಎಸ್ ಭಟ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net