ದುರ್ಬಲರ ಏಳ್ಗೆಗೆ ಮತ್ತಷ್ಟು ಶ್ರಮಿಸಿ

9 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಲಯನ್ಸ್​ ಕ್ಲಬ್​ ನಿರಂತರವಾಗಿ ಸಮಾಜಮುಖಿ ಕಾರ್ಯಗಳ ಮೂಲಕ ಅಂತಾರಾಷ್ಟ್ರೀಯವಾಗಿ ಗಮನ ಸೆಳೆದಿದ್ದು, ಸಮಾಜದಲ್ಲಿ ಅಶಕ್ತರು, ಆರ್ಥಿಕ ದುರ್ಬಲರ ಏಳ್ಗೆಗೆ ಸಂಸ್ಥೆಯು ಮತ್ತಷ್ಟು ಶ್ರಮಿಸಲಿ ಎಂದು ಮಾಜಿ ಜಿಲ್ಲಾ ಗನರ್ವರ್​ ಡಾ. ರವಿ ಹೆಗಡೆ ಹೇಳಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಲಯನ್ಸ್​ ಕ್ಲಬ್​ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜ ಅಭಿವೃದ್ಧಿ ಸೇರಿ ಸಾಮಾಜಿಕ ಕಾರ್ಯಗಳಿಗೆ ಸರ್ಕಾರವನ್ನು ಎದುರು ನೋಡುತ್ತಿಲ್ಲ. ಸಂಘ-ಸಂಸ್ಥೆಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಲಯನ್ಸ್​ ಸೇರಿ ಸಂಘ-ಸಂಸ್ಥೆಗಳು ಮಾನವೀಯತೆ ಕಡೆಗೆ ಸಾಗಬೇಕಿದೆ. ಪ್ರತಿ ಮನೆಯಲ್ಲೂ ಮನುಷ್ಯ ಹುಟ್ಟುತ್ತಾನೆ. ಆದರೆ, ಪ್ರತಿ ಮನೆಯಲ್ಲಿ ಮನುಷ್ಯತ್ವ ಹುಟ್ಟುವುದಿಲ್ಲ. ಈ ಹಿನ್ನೆಲೆಯಲ್ಲಿ ಮಾನವೀಯತೆ, ಮನುಷ್ಯತ್ವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಲಯನ್ಸ್​ ಕ್ಲಬ್​ ಧಾರವಾಡದ ನೂತನ ಅಧ್ಯಕ್ಷರಾಗಿ ಗುರುರಾಜ ಪಿಸೆ, ಕಾರ್ಯದರ್ಶಿಯಾಗಿ ಕವಿತಾ ಅಂಗಡಿ ಹಾಗೂ ಖಜಾಂಚಿಯಾಗಿ ವೃಷಭ ಕರೋಲೆ ಅಧಿಕಾರ ಸ್ವೀಕರಿಸಿದರು.
ಗುರುರಾಜ ಪಿಸೆ ಮಾತನಾಡಿ, ಸಮಾಜಕ್ಕೆ ಅಗತ್ಯವಾದ, ನಿರೀಕ್ಷಿತ ಕಾರ್ಯಗಳನ್ನು ಮಾಡಲು ಯೋಜನೆ ರೂಪಿಸಲಾಗಿದೆ. ಸಂಸ್ಥೆಯ ಎಲ್ಲ ಸದಸ್ಯರ ಸಹಕಾರದೊಂದಿಗೆ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುತ್ತೇನೆ ಎಂದರು.
ಹಿರಿಯ ಸದಸ್ಯರಾದ ಆನಂದ ಕಮಲಾಪುರ, ಹರ್ಷ ಡಂಬಳ, ಮುಕುಂದ ಹೆಬ್ಳೀಕರ, ಕೆ.ವಿ. ಅಚ್ಯುತ್​, ಆರ್​.ಕೆ. ಹೆಗಡೆ, ವಿದ್ಯಾಧರ ಅಂಗಡಿ, ಭುಜಂಗ ಶೆಟ್ಟಿ, ಗಿರಿಧರ ದೇಸಾಯಿ, ಅನುಪಮಾ ಶೆಟ್ಟಿ, ವನಿತಾ ಹೆಬಸೂರ, ಶ್ಯಾಮಲಾ ಹೆಗಡೆ ಹಾಗೂ ನಿಕಟಪೂರ್ವ ಅಧ್ಯೆ ಶೈಲಾ ಕರಿಗುದರಿ, ಕಾರ್ಯದರ್ಶಿ ಡಾ. ಅನಿರುದ್ಧ ಕುಲಕರ್ಣಿ, ಖಜಾಂಚಿ ಉಷಾ ಗದಗಿಮಠ ಇದ್ದರು.
ಆರತಿ ಕಮಲಾಪುರ ಸ್ವಾಗತಿಸಿದರು. ಪ್ರಾದೇಶಿಕ ಅಧ್ಯಕ್ಷ ಅರವಿಂದ ಹೆಬಸೂರ, ಡಾ.ರಾಜಶ್ರೀ ಗುದಗನವರ ಮತ್ತು ಪ್ರೊ. ಸುರೇಶ ಗುದುಗನವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net