

ಇಟಗಿ: ಮಕ್ಕಳ ಕಲಿಕೆಗೆ ಶಿಕ್ಷಕರ ಜತೆಗೆ ಪಾಲಕರ ಸಹಕಾರ ಮುಖ್ಯವಾಗಿದೆ. ಶಾಲಾ ಅವಧಿಯ ಬಳಿಕ ತಾಯಂದಿರು ಮನೆಯಲ್ಲಿ ಸೂಕ್ತ ಕಲಿಕಾ ವಾತಾವರಣ ನಿರ್ಮಿಸುವ ಮೂಲಕ ಮಕ್ಕಳ ಭವಿಷ್ಯದ ಉನ್ನತಿಗೆ ಶ್ರಮಿಸಬೇಕು ಎಂದು ಸಂಸ್ಥೆ ಚೇರ್ಮನ್ ವಿಜಯಕುಮಾರ ಸಾಣಿಕೊಪ್ಪ ಹೇಳಿದರು.
ಗ್ರಾಮದ ಜನತಾ ಶಿಕ್ಷಣ ಪ್ರಸಾರ ಸಮಿತಿಯ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಹಾಗೂ ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಯದರ್ಶಿ ಶ್ರೀಶೈಲ ತುರಮರಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹತ್ತಾರು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸದುಪಯೋಗ ಪಡೆದುಕೊಂಡು ಉಜ್ವಲ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಸ್ಥೆ ನಿರ್ದೇಶಕ ಶಂಕರ ಗಣಾಚಾರಿ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ಬಿ.ವಿ.ಬೆಣಚಿನಮರಡಿ, ಪ್ರಾಚಾರ್ಯ ಎಸ್.ಎಸ್.ಶಾಸೀ, ಶಿಕ್ಷಕರಾದ ಎಸ್.ಬಿ.ಮೇತ್ರಿ, ಅರವಿಂದ ಪಾಟೀಲ, ಕೆ.ಟಿ.ತಳವಾರ, ಬಿ.ಕೆ.ನಾವಲಗಟ್ಟಿ,
ವಿ.ಎಲ್.ನಾಯ್ಕ, ಗಣೇಶ ಜಗಾಪುರ, ಶಿಕ್ಷಕಿ ಎಂ.ಎಸ್.ಪಾಟೀಲ ಇತರರಿದ್ದರು.