

ತಿಕೋಟಾ: ಗ್ರಾಮೀಣ ಪ್ರದೇಶದಲ್ಲಿ ಶಿಣದ ಉನ್ನತಿಕರಣಕ್ಕೆ ಬಸವಂತರಾಯ ಮಹಾರಾಜರು ಹಾಗೂ ಬಸವರಾಜ ಮೇಲುಪ್ಪರಗಿಮಠ ಅವರಂತೆ ಶ್ರಮಿಸಬೇಕು ಎಂದು ಹಿರಿಯ ಪ್ರವಚನಕಾರ ಬಾಬುರಾವ ಮಹಾರಾಜ ಹೇಳಿದರು.
ಹೊನವಾಡ ಗ್ರಾಮದ ವಿಠ್ಠಲ ಮಂದಿರದಲ್ಲಿ ಇತ್ತೀಚೆಗೆ ಲಿಂಗೈಕ್ಯ ಬಸವಂತರಾಯ ಮಹಾರಾಜರ ಹಾಗೂ ಲಿಂಗೈಕ್ಯ ಬಸವರಾಜ ಮೇಲುಪ್ಪರಗಿಮಠ ಅವರ ದತ್ತಿನಿಧಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಹೊನವಾಡದ ಈ ಇಬ್ಬರು ಸಾಧಕರಿಂದ ಶೈಣಿಕ ಹಾಗೂ ಆಧ್ಯಾತ್ಮಿಕ ವಲಯ ಪ್ರಗತಿಯಾಗಿದೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ಹಾಸಿಂಪೀರ ವಾಲಿಕಾರ, ಕನ್ನಡ ಸಾಹಿತ್ಯ ಪರಿಷತ್ಗೆ ಶತಮಾನದ ಇತಿಹಾಸವಿದೆ. ಸಾಹಿತ್ಯದಿಂದ ಸಾಮಾಜಿಕ ಮೌಲ್ಯ ಕಾಪಾಡಲು ಸಾಧ್ಯ ಎಂದರು.
ಉಪನ್ಯಾಸಕ ಡಿ.ಬಿ. ಡೇಮ್ರಿ, ಎಂ.ಎಸ್. ಖೋದ್ನಾಪೂರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ, ಬಿಜ್ಜರಗಿ ಗ್ರಾಪಂ ಅಧ್ಯ ಸುಭಾಷಗೌಡ ಪಾಟೀಲ, ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿದರು.
ದತ್ತಿ ದಾನಿಗಳಾದ ಗೌರಿಶಂಕರ ಹಿರೇಮಠ ಹಾಗೂ ವೆಂಕಪ್ಪ ಉಪ್ಪಾರ ಅವರನ್ನು ಪರಿಷತ್ನಿಂದ ಸನ್ಮಾನಿಸಲಾಯಿತು.
ವಿಜಯಕುಮಾರ್ ಹಿರೇಮಠ, ಡಾ.ಸಿದ್ದಲಿಂಗಪ್ಪಾ ಸಾರವಾಡ, ಅವಿನಾಶ ಮೇಲುಪ್ಪರಗಿಮಠ, ಮಹಾದೇವ ಜಾಧವ, ಸಾಬು ಕಾತ್ರಾಳ ಧರೆಪ್ಪ ಯಚ್ಚಿ, ಸಿದ್ದು ಬೆಳಗಾವಿ, ಲಿಂಗರಾಜ ಪಾಟೀಲ, ಶರಣು ಕಂಠಿ, ಬಸವರಾಜ ನಾವಿ, ಮುರಿಗೆಪ್ಪ ಕೋಟಿ, ದರೆಪ್ಪ ಚಾವರ, ಬಸವರಾಜ ಐಗಳಿಮಠ, ನಚಿಕೇತ ಹಿರೇಮಠ, ಶ್ರೀಶೈಲ ಮಾಲಗಾರ, ಸಚೀನ ಸಾವಂತ, ಶ್ರೀಕಾಂತ ಕಂಟೇಕಾರ, ಬಸು ಏಕನಾಟಿ, ಚಿದಾನಂದ ಅರಮೋಟಿ, ಉಮೇಶ ಮೂರಕಲಿ, ಚಿದಾನಂದ ಗೊರವರ, ಬಾಪು ದೇವನಾಯಕ, ಪುಟ್ಟು ಮಠಪತಿ, ಶಿವಾಜಿ ಜಾಧವ, ಆನಂದ ಕೊರಬು, ಅಕ್ಬರ ತಿಕೋಟಿ ಇದ್ದರು.
ಆನಂದ ಹೊನವಾಡ ಪ್ರಾರ್ಥಿಸಿದರು. ಶರಣಮ್ಮ ಹಾದಿಮನಿ ಸ್ವಾಗತಿಸಿದರು. ಲಕ್ಷಿ$್ಮ ಕಾತ್ರಾಳ ಕವನ ವಾಚಿಸಿದರು. ಹಣಮಂತ ಮೋಹಿತೆ ವಂದಿಸಿದರು.