ಗ್ರಾಮೀಣ ಕ್ರೀಡೆಗಳ ಉಳಿವಿಗೆ ಶ್ರಮಿಸಿ

16 kdr 1
Published on

ಕಡೂರು: ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಸ್ಪರ್ಧಾಳುಗಳು ಕ್ರೀಡಾ ಸ್ಫೂರ್ತಿಯನ್ನು ಮೆರೆಯಬೇಕಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ, ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ಪುರ ಸಹಯೋಗದೊಂದಿಗೆ ಎರಡು ದಿನ ನಡೆಯುವ ಮೈಸೂರು ವಿಭಾಗ ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸ ಬೇಕಾದ ಕರ್ತವ್ಯ ನಮ್ಮೆಲ್ಲರದ್ದಾಗಬೇಕಿದೆ. ತಾಲೂಕಿನಲ್ಲಿ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದ್ದು, ಹಲವು ವಿಭಾಗಗಳಲ್ಲಿ ಪ್ರತಿಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಮೈಸೂರು ವಿಭಾಗೀಯ ಮಟ್ಟದ 8 ಜಿಲ್ಲೆಗಳಿಂದ ಬಾಲಕ, ಬಾಲಕಿಯರ ಒಟ್ಟು 32 ತಂಡಗಳು ಭಾಗವಹಿಸಿದ್ದವು. ಆಲಂಕೃತ ಕುದುರೆ ಮೇಲೆ ತರಲಾದ ಕ್ರೀಡಾಜ್ಯೋತಿಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಹರೀಶ್ ಸ್ವೀಕರಿಸಿದರು. ಆರಂಭದ ಮಳೆ ಬಂದು ಕ್ರೀಡಾಕೂಟಕ್ಕೆ ತೊಂದರೆಯಾಗುವಂತೆ ಕಂಡು ಬಂದರೂ ಮಳೆ ನಿಂತು ಕಾರ್ಯಕ್ರಮ ಮುಂದುವರೆಯಿತು. ನಾಡಗೀತೆ ಹಾಡುವಾಗ ಕ್ರೀಡಾ ತಂಡಗಳು ಧ್ವನಿಗೂಡಿಸದಿರುವುದಕ್ಕೆ ಶಾಸಕ ಆನಂದ್ ಆಕ್ಷೇಪಿಸಿದರು. ವಿದ್ಯಾರ್ಥಿಗಳು ಮೊದಲ ನಾಡಗೀತೆಗೆ ಗೌರವ ಸಲ್ಲಿಸುವುದನ್ನು ಕಲಿಯಬೇಕು ಆಗ ರಾಷ್ಟ್ರ ಮತ್ತು ರಾಜ್ಯದ ಮೇಲೆ ಅಭಿಮಾನ ಬೆಳೆಯಲು ಸಾಧ್ಯವಾಗಲಿದೆ ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net