ರೇಣುಕಾಚಾರ್ಯ ಜಯಂತ್ಯುತ್ಸವ ಯಶಸ್ವಿಗೆ ಶ್ರಮಿಸಿ

1 hnd press
ಹುನಗುಂದ ಗಚ್ಚಿನಮಠದಲ್ಲಿ ರೇಣುಕಾಚಾರ್ಯ ಮತ್ತು ಹಾನಗಲ್ಲ ಕುಮಾರೇಶ್ವರ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅಮರೇಶ್ವರ ದೇವರು ಮಾತನಾಡಿದರು. ವೇ. ಮಹಾಂತಯ್ಯ ಗಚ್ಚಿನಮಠ, ವೀರಭದ್ರಯ್ಯ ಸರಗಣಾಚಾರಿ ಇದ್ದರು.
Published on

ಹುನಗುಂದ: ಪಟ್ಟಣದಲ್ಲಿ ಏ.9 ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಜಗದ್ಗುರು ರೇಣುಕಾಚಾರ್ಯ ಮತ್ತು ಹಾನಗಲ್ಲ ಕುಮಾರೇಶ್ವರ ಜಯಂತ್ಯುತ್ಸವ ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕೆಂದು ಗಚ್ಚಿನಮಠದ ಅಮರೇಶ್ವರ ದೇವರು ಹೇಳಿದರು.

ಪಟ್ಟಣದ ಗಚ್ಚಿನಮಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಮತ್ತು ಹಾನಗಲ್ಲ ಕುಮಾರೇಶ್ವರ ಜಯಂತಿ ಆಚರಿಸುವ ಕುರಿತು ಭಾನುವಾರ ಸಂಜೆ ಕರೆದ ಪೂರ್ವಭಾವಿ ಮತ್ತು ಭಾವೈಕ್ಯತೆಯ ಸಭೆಯಲ್ಲಿ ಅವರು ಮಾತನಾಡಿದರು.

ಸಮಾಜಕ್ಕೆ ತಮ್ಮದೆ ಆದ ಅಪಾರ ಕೊಡುಗೆ ನೀಡಿದ ಜಗದ್ಗುರ ರೇಣುಕಾಚಾರ್ಯ ಮತ್ತು ಹಾನಗಲ್ಲ ಕುಮಾರೇಶ್ವರ ಅವರಾಗಿದ್ದು, ಅಂತಹ ಶರಣರ ಜಯಂತಿಯನ್ನು ಶ್ರೀಮಠದಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಗಚ್ಚಿನಮಠವು ಒಂದು ಭಾವೈಕ್ಯೆತೆಯ ಮಠವಾಗಿದ್ದು ಆದ್ದರಿಂದ ಎಲ್ಲ ಸಮಾಜದ ಹಿರಿಯರು ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ಸಿಗೊಳಿಸಬೇಕೆಂದು ಎಂದು ತಿಳಿಸಿದರು.

ವೇದಮೂರ್ತಿ ಮಹಾಂತಯ್ಯ ಗಚ್ಚಿನಮಠ ಮಾತನಾಡಿದರು.

ವೀರಭದ್ರಯ್ಯ ಸರಗಣಾಚಾರಿ, ಚನ್ನಬಸಯ್ಯ ಹಿರೋಳ್ಳಿಮಠ, ಜಿ.ಬಿ. ಕಂಬಾಳಿಮಠ, ಬಸವರಾಜ ಕಂಬಾಳಿಮಠ, ಬಸವರಾಜ ಗೊಣ್ಣಾಗರ, ರವಿ ತಾವರಗೇರ, ಅರುಣೋದಯ ದುದ್ಗಿ, ಗಿರಿಮಲ್ಲಪ್ಪ ಹಳಪೇಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net