

ಮುನವಳ್ಳಿ: ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಲು ನಿರಂತರವಾಗಿ ಶ್ರಮಿಸಬೇಕು ಎಂದು ಶಾಸಕ ವಿಶ್ವಾಸ ವೆದ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪುರಸಭೆಯ ಸಾಮಾನ್ಯ ಸಭೆಯುನ್ನುದ್ದೇಶಿಸಿ ಮಾತನಾಡಿದರು. ಸರ್ಕಾರದ ಕೆಲಸ ದೇವರ ಕೆಲಸವಾಗಿದ್ದು, ಯಾವತ್ತೂ ಪುರಸಭೆಯ ಅಧಿಕಾರಿಗಳು ಜನರನ್ನು ಅಲೆದಾಡಿಸದೆ ತ್ವರಿತವಾಗಿ ಸ್ಪಂದಿಸಬೇಕು. ಪ್ರತಿದಿನ ಪಟ್ಟಣದ ಸ್ವಚ್ಛತೆಯ ಬಗ್ಗೆ ನಿಗಾವಹಿಸಬೇಕು. ಸಾರ್ವಜನಿಕರಿಂದ ಯಾವುದೇ ತಕರಾರುಗಳು ಬರದಂತೆ ಕಾರ್ಯನಿರ್ವಹಿಸಬೇಕೆಂದರು.
ಅಭಿವೃದ್ಧಿ ಕಾರ್ಯಗಳಿಗೆ ರ್ನಿಣಯ: ರಾಜ್ಯ ಹಣಕಾಸು ಆಯೋಗದ ಕುಡಿಯುವ ನೀರಿನ ಅನುದಾನ ಹಾಗೂ ಎಸ್ಎ್ಸಿ ಅನುದಾನದ ಉಳಿತಾಯ ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸುವುದು. ಅಕ್ಕಮಹಾದೇವಿ ಮಠದ ಹತ್ತಿರ ಶುದ್ಧ ಕುಡಿಯುವ ನೀರಿನ ಟಕ ನಿರ್ಮಾಣ ಮತ್ತು ವಿವಿಧ ಟೆಂಡರ್ ಕರೆದ ಕಾಮಗಾರಿಗಳ ದರ ಅನುಮೋದನೆ ಸೇರಿ ಹಲವು ವಿಷಯಗಳ ಬಗ್ಗೆ ರ್ನಿಣಯ ತೆಗೆದುಕೊಳ್ಳಲಾಯಿತು. ಮುನವಳ್ಳಿ ಪುರಸಭೆಗೆ ಪಂಚಲಿಂಗೇಶ್ವರ ಪುರಸಭೆ ಎಂದು ನಾಮಕರಣ ಮಾಡಲು ಸರ್ವಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.
ಪುರಸಭೆ ಅಧ್ಯ ಸಿ.ಬಿ. ಬಾಳಿ, ಉಪಾಧ್ಯೆ ಕಾಶವ್ವ ಹಿರೇಮೇತ್ರಿ, ಪುರಸಭೆ ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ, ಕಂದಾಯ ಅಧಿಕಾರಿ ಅನಿಲ ಗಿಡ್ನಂದಿ, ಆರೋಗ್ಯ ನಿರೀಕ ಎಸ್.ಜಿ.ಗೌಡರ, ಬಿ.ಎಸ್.ಹಲಗಿ, ಅಡಿವೆಪ್ಪ ಬೀರಸಿದ್ದಿ, ಯಲ್ಲಪ್ಪ ಭಜಂತ್ರಿ ಸೇರಿ ಪುರಸಭೆ ಸದಸ್ಯರು ಇದ್ದರು.