

ಹುಬ್ಬಳ್ಳಿ: ಭಾವಸಾರ ಹಾಸ್ಟೆಲ್ ಟ್ರಸ್ಟ್ ವತಿಯಿಂದ ಇಲ್ಲಿಯ ವಿದ್ಯಾನಗರದ ತಿಮ್ಮಸಾಗರ ದೇವಸ್ಥಾನ ರಸ್ತೆ ಬಳಿಯ ನವೀಕೃತ ಭಾವಸಾರ ಭವನದ ಉದ್ಘಾಟನಾ ಸಮಾರಂಭವು ಬುಧವಾರ ಜರುಗಿತು.
ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ಡಾ. ರಾಜು ಜವಳಕರ ಭವನ ಉದ್ಘಾಟಿಸಿ ಮಾತನಾಡಿ, ಸಮಾಜದವರು ಸಮಾಜ ಸೇವೆಗೆ ಮುಂದಾಗಬೇಕು. ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಮೀಸಲಿಡಬೇಕು. ಹಿಂದುಳಿದವರ ಏಳ್ಗೆಗೆ ಶ್ರಮಿಸಬೇಕು ಎಂದರು.
ಸಭಾ ಭವನಕ್ಕಾಗಿ ದೇಣಿಗೆ ನೀಡಿದ ಲಲಿತಾತಾಯಿ ಗುಜ್ಜರ, ಭಾವಸಾರ ಕ್ಷತ್ರಿಯ ಸಹಕಾರ ಸಂಘದ ಚೇರ್ಮನ್ ಶಂಕರ ಕುಂಟೆ ಅವರನ್ನು ಸನ್ಮಾನಿಸಲಾಯಿತು.
ಭಾವಸರ ಹಾಸ್ಟೆಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಬಿ.ಐ. ಮಿರಜಕರ, ರಾಷ್ಟ್ರೀಯ ಕಾರ್ಯದರ್ಶಿ ಕಿಶನರಾವ್‌ಗಡ್ಡಾಳೆ, ಸದಸ್ಯರಾದ ಕೆ.ಜಿ. ಟಿಕಾರೆ, ಡಾ. ಸುರೇಶ ಕಪಟಕರ, ಪ್ರಕಾಶ ಇಜಂತಕರ, ರಾಕೇಶ ಚುಟಕೆ, ಅರುಣ ಬೆಳಂಕರ, ಪ್ರಕಾಶ ತಿರುಮಲ್ಲೆ, ಎಂ.ಕೆ. ರಾಶಿನಕರ, ಕಿರಣ ಟಿಕಾರೆ, ರಾಮಚಂದ್ರ ನವಲೆ, ಅಮರ ಟಿಕಾರೆ, ಸಾಯಿನಾಥ ಅಂಬೇಕರ, ಕುಶಾಲ ಬೇದ್ರೆ, ದೀಪಕ ಮಾತಾಡೆ, ಭಾರತಿತಾಯಿ ಸರ್ವದೆ, ಪುಷ್ಪಾ ಮುಧೋಳಕರ, ಜಗದೀಶ ಹಂಚಾಟೆ ಇತರರು ಉಪಸ್ಥಿತರಿದ್ದರು.