ಸಮಾಜ ಪರಿವರ್ತನೆ ಶ್ರಮಿಸಿ

02 TKE 2
Published on

ತರೀಕೆರೆ: ಪ್ರಾಮಾಣಿಕವಾಗಿ ಸಂಪಾದಿಸುವ ದುಡಿಮೆ, ತ್ಯಾಗವಿಲ್ಲದ ಜೀವನ ಅರ್ಥ ಪೂರ್ಣವಾಗಲಾರದು ಎಂದು ನಿವೃತ್ತ ಪ್ರಾಚಾರ್ಯ ಚನ್ನಬಸಪ್ಪ ಹೇಳಿದರು.
ಅಜ್ಜಂಪುರದಲ್ಲಿ ಹಿರಿಯ ನಾಗರಿಕ ವೇದಿಕೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಅವರ ಬಗ್ಗೆ ಇಂದು ಅವಹೇಳನಕಾರಿಯಾಗಿ ಮಾತನಾಡುವ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ನಾಗರಿಕರು ಸಮಾಜದಲ್ಲಿ ಸೃಷ್ಟಿಯಾಗಿರುವ ದುರಹಾಂಕಾರದ ನಡುವಳಿಕೆ ಬದಲಾಯಿಸುವ ಪ್ರಯತ್ನ ಮಾಡಬೇಕು. ದೇಶಕ್ಕಾಗಿ ಮಡಿದ ಮಹನೀಯರ ಜೀವನ ಮತ್ತು ಆದರ್ಶದ ತಿಳಿ ಹೇಳಿ ಉತ್ತಮ ವ್ಯಕ್ತಿಗಳಾಗಿ ಪರಿವರ್ತಿಸಲು ಶ್ರಮಿಸಬೇಕು ಎಂದು ಹೇಳಿದರು. ಹಿರಿಯ ನಾಗರಿಕ ವೇದಿಕೆ ಉಪಾಧ್ಯಕ್ಷ ಎಚ್.ಟಿ.ಸಿದ್ದಪ್ಪ , ಹಿರಿಯ ನಾಗರೀಕ ವೇದಿಕೆ ಅಧ್ಯಕ್ಷ ಡಿ.ಶಿವಮೂರ್ತಿ, ಕಾರ್ಯಾಧ್ಯಕ್ಷ ಲಕ್ಷ್ಮಣಪ್ಪ, ಮರುಳಸಿದ್ದಪ್ಪ, ಎಚ್.ಪುಟ್ಟಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net