ಗುಣಾತ್ಮಕ ಫಲಿತಾಂಶಕ್ಕೆ ಶ್ರಮಿಸಿ

21 dml
ಮೇವುಂಡಿ ಗ್ರಾಮದ ಶ್ರೀಮತಿ ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮುಂಡರಗಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಉದ್ಘಾಟಿಸಿದರು.
Published on

ಡಂಬಳ: ಎಸ್​ಎಸ್​ಎಲ್​ಸಿ ಫಲಿತಾಂಶ ಸುಧಾರಣೆಗಾಗಿ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳ ಗುಣಾತ್ಮಕ ಫಲಿತಾಂಶಕ್ಕಾಗಿ ಪ್ರತಿ ಶಿಕ್ಷಕರು ಶ್ರಮಿಸಬೇಕು ಎಂದು ಪ್ರಭಾರಿ ಬಿಇಒ ಗಂಗಾಧರ ಅಣ್ಣಿಗೇರಿ ಸೂಚನೆ ನೀಡಿದರು.

ಶುಕ್ರವಾರ ಮೇವುಂಡಿ ಗ್ರಾಮದ ಶ್ರೀಮತಿ ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ 2ನೇ ಮಾಸಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಉಪನ್ಯಾಸಕ ಎಚ್.ಬಿ. ರಡ್ಡೇರ, ಮುಖ್ಯ ಶಿಕ್ಷಕ ಯುವರಾಜ ಮುಂಡರಗಿ, ಎ.ಎಸ್. ಪಾಟೀಲ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಲವು ಬದಲಾವಣೆ ತಂದಿದ್ದು, ವೆಬ್, ಸಿಸಿ, ಡ್ರೋಣ್ ಕ್ಯಾಮರಾಗಳು ನಿಗಾ ವಹಿಸಲಿವೆ ಎಂದರು.

ಶಿಕ್ಷಕಿ ಎಸ್.ವಿ. ಪಾಟೀಲ ನಿರೂಪಿಸಿದರು. ಎಸ್​ಡಿಎಂಸಿ ಅಧ್ಯಕ್ಷ ರವಿ ಮೇಟಿ, ಗ್ರಾಪಂ ಸದಸ್ಯ ಶರಣಪ್ಪ ಕರಿಗಾರ, ಬಿಆರ್​ಪಿ ಹನಮರೆಡ್ಡಿ ಇಟಗಿ, ಇಸಿಒ ಬಿ. ಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net