ಚಿತ್ರದುರ್ಗ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕೊಡಬೇಕೆಂದು ಒತ್ತಾಯಿಸಿ ಎರಡು ವರ್ಷಗಳಿಂದ ನಿರಂತರ ಹೋ ರಾಟ ಮಾಡಿಕೊಂಡು ಬರುತ್ತಿದ್ದರೂ ರಾಜ್ಯಸರ್ಕಾರ ಬೇಡಿಕೆ ಕಡೆಗಣಿಸಿರುವುದನ್ನು ಖಂಡಿಸಿ ಸೆ.20ರಂದು ಹಾವೇರಿ ಜಿಲ್ಲೆ ಶಿಗ್ಗಾವಿಯ ಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಧರಣಿ ನಡೆಸಲಾಗುವುದು ಎಂದು ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪೀಠದ ಜಿಲ್ಲಾಧ್ಯಕ್ಷ ಕೆ.ಸಿ.ಗಂಗಾಧರಪ್ಪ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಬೇಡಿಕೆ ಈಡೇರಿಸುವುದಾಗಿ ನಾಲ್ಕು ಬಾರಿ ಸರ್ಕಾರ ಮಾತು ಕೊಟ್ಟಿತ್ತು. ಆದರೆ ಬೇಡಿಕೆ ಈಡೇರಿಸದೆ ವಚನ ಭ್ರಷ್ಟವಾಗಿದೆ. ಇದನ್ನು ವಿರೋಧಿಸಿ ಅಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಬೇಡಿಕೆ ಈಡೇರಿಸದೆ ಸರ್ಕಾರ ತನ್ನ ಹಠಮಾರಿ ಧೋರಣೆ ಮುಂದುವರಿಸಿದ್ದೇ ಆದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದೆಂದು ಎಚ್ಚರಿಸಿ ದರು. ಸಮುದಾಯದ ಪ್ರಮುಖರಾದ ಜಿತೇಂದ್ರ ಹುಲಿಕುಂಟೆ, ಎಚ್.ಎಂ.ಮಂಜುನಾಥ್,ಎಸ್.ತಿಪ್ಪೇಸ್ವಾಮಿ,ಕಾರ್ತಿಕ್,ನವೀನ್ ಕುಮಾರ್,ನಾಗರಾಜ್‌ನಂದಿಪುರ,ಪ್ರಶಾಂತ್‌ರೆಡ್ಡಿ,ವಿಜಯಕುಮಾರ್,ಮನು ಇದ್ದರು.
-----