

ಕಾರವಾರ: ರಸ್ತೆಯಲ್ಲಿ ಬಿದ್ದ ಹೊಂಡ ಮುಚ್ಚುವಂತೆ ಆಗ್ರಹಿಸಿ ನಗರದ ಹಬ್ಬುವಾಡ ಹರಿದೇವನಗರ ಸಮೀಪ ಆಟೋ ರಿಕ್ಷಾ ಚಾಲಕರು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಠಾತ್ ರಸ್ತೆ ತಡೆ ನಡೆಸಿದರು.
ಹೊಂಡ ಬಿದ್ದು ನಾಲ್ಕೈದು ತಿಂಗಳು ಕಳೆದಿದೆ. ವಾಹನಗಳು ಹಾಳಾಗುತ್ತಿವೆ. ಅಪಘಾತಗಳು ಸಂಭವಿಸುತ್ತಿವೆ. ನಗರಸಭೆ ಹೊಂಡ ತುಂಬದೇ ನಿರ್ಲಕ್ಷಯ ವಹಿಸಿದೆ ಎಂದು ಆರೋಪಿಸಿದರು. ಇನ್ಸ್ಪೆಕ್ಟರ್ ಎಚ್.ಸಾತೇನಹಳ್ಳಿ ನೇತೃತ್ವದಲ್ಲಿ ಪೊಲೀಸರು ಆಗಮಿಸಿ ವಾಹನ ಓಡಾಟಕ್ಕೆ ಒಂದು ಕಡೆ ಅವಕಾಶ ಮಾಡಿಕೊಟ್ಟರು. ಗ್ರೇಡ್-2 ತಹಸೀಲ್ದಾರ್ ರೂಪಾ ಬಾಡ್ಕರ್ ಆಗಮಿಸಿ ಮನವಿ ಸ್ವೀಕರಿಸಿದರು. ಆದರೆ, ಅದಕ್ಕೆ ಒಪ್ಪದ ಪ್ರತಿಭಟನಾಕಾರರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಂದು ಮನವಿ ಸ್ವೀಕರಿಸಬೇಕು ಎಂದು ಒತ್ತಾಯ ಮಾಡಿದರು. ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ಆಗಮಿಸಿ ರಸ್ತೆ ಹೊಂಡ ತುಂಬಲ ಟೆಂಡರ್ ಆಗಿದೆ. ಆದರೆ, ಮಳೆಯ ಕಾರಣ ಕಾಮಗಾರಿ ಪ್ರಾರಂಭಿಸಿಲ್ಲ. ವಾರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.