ಹಮಾಸ್ ಸಂಘರ್ಷ ಕೊನೆಗೊಳಿಸಿ

2010Klb02
Published on

ಕಲಬುರಗಿ: ವಿಶ್ವಸಂಸ್ಥೆ, ಭಾರತ ಸೇರಿ ಎಲ್ಲ ಅಂತಾರಾಷ್ಟ್ರೀಯ ಸಮುದಾಯಗಳು ಹಮಾಸ್ ಸಂಘರ್ಷ ಕೊನೆಗೊಳಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರತಿನಿಧಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಸ್ರೇಲ್ ಮತ್ತು ಹಮಾಸ್ ದೇಶಗಳ ನಡುವಿನ ದಾಳಿ ಮತ್ತು ಪ್ರತಿದಾಳಿಯನ್ನು ಒಕ್ಕೂಟ ಬಲವಾಗಿ ಖಂಡಿಸುತ್ತದೆ. ಈ ಎರಡೂ ದೇಶಗಳ ಸಾವಿರಾರು ನಾಗರಿಕರು, ಮಕ್ಕಳು ಸಾವನ್ನಪ್ಪುತ್ತಿವೆ. ಆಸ್ತಿ ನಾಶಕ್ಕೆ ಕಾರಣವಾಗಿದೆ. ವಿಶ್ವಸಂಸ್ಥೆ ನಿರ್ಣಯ ನಿರಂತರ ಉಲ್ಲಂಘಿಸುತ್ತಿರುವ ಇಸ್ರೇಲ್ ಪ್ಯಾಲಿಸ್ತೇನಿಯರ ನೆಲ ಬೇಕಾಬಿಟ್ಟಿ ಅಕ್ರಮಿಸಿಕೊಂಡಿರುವುದು, ಪಶ್ಚಿಮ ದಂಡೆಯಲ್ಲಿ ವಸಾಹತು ಸ್ಥಾಪನೆಗೆ ಕ್ರಮ ವಹಿಸುತ್ತಿದೆ ಎಂದರು.

ಇಸ್ರೇಲ್ ಅಕ್ರಮ ವಸಾಹತು ಮತ್ತು ಪ್ಯಾಲಿಸ್ತೇನ್ ಭೂಮಿ ವಶಪಡಿಸಿಕೊಳ್ಳುವುದನ್ನು ಹಿಂತೆಗೆದುಕೊಳ್ಳುವಂತೆ ಮಾಡಬೇಕು. ಎರಡೂ ರಾಷ್ಟçಗಳ ಪರಿಹಾರದ ಭದ್ರತಾ ಮಂಡಳಿ ನಿರ್ಣಯದ ಅನುಷ್ಠಾನ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.

ಕೆ.ನೀಲಾ, ಡಾ.ಮೀನಾಕ್ಷಿ ಬಾಳಿ, ಶಾಂತಾ ಘಂಟೆ, ಆರ್.ಕೆ.ಹುಡಗಿ, ಎಂ.ಬಿ.ಸಜ್ಜನ್, ಸುಧಾಮ ಧನ್ನಿ, ಶ್ರೀಶೈಲ ಘೂಳಿ, ಮುಬೀನ್ ಅಹ್ಮದ್, ಅರ್ಜುನ ಭದ್ರೆ, ಶರಣಬಸಪ್ಪ ಮಮಶೆಟ್ಟಿ, ಯಶ್ವಂತ ಪಾಟೀಲ್, ಮೇಘರಾಜ ಕಠಾರೆ, ನಾಗಪ್ಪ ರಾಯಚೂರಕರ್, ವಿರುಪಾಕ್ಷಪ್ಪ ತಡಕಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net