ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮುಷ್ಕರ

indi 27--2 dharani
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟಣದ ಪೌರಕಾರ್ಮಿಕರು ಇಂಡಿ ಪಟ್ಟಣದ ಪುರಸಭೆ ಮುಂಭಾಗ ಮಂಗಳವಾರದಿಂದ ಅನಿರ್ದಿಷ್ಠಾವಧಿ ಮುಷ್ಕರ ಆರಂಭಿಸಿದರು.
Published on

ಇಂಡಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪಟ್ಟಣದ ಪೌರಕಾರ್ಮಿಕರು ಪುರಸಭೆ ಮುಂಭಾಗ ಮಂಗಳವಾರದಿಂದ ಅನಿರ್ದಿಷ್ಠಾವಧಿ ಮುಷ್ಕರ ಆರಂಭಿಸಿದರು.

ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಧರಣಿ ಬೆಂಬಲಿಸಿ ಮಾತನಾಡಿ, ಪೌರ ಕಾರ್ಮಿಕರು ಕಾನೂನು ಬದ್ಧವಾಗಿ ತಮ್ಮ ಹಕ್ಕು ಕೇಳುತ್ತಿದ್ದಾರೆ. ಸರ್ಕಾರ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಪೌರ ಕಾರ್ಮಿಕರು ಇಲ್ಲದಿದ್ದರೆ ಯಾವ ಕೆಲಸವೂ ಆಗಲ್ಲ. ಅವರಿಗೆ ಗೌರವಿಸುವುದು ಸರ್ಕಾರದ ಕರ್ತವ್ಯ ಎಂದರು.

ಬೆಳಗ್ಗೆ 7 ಗಂಟೆಗೆ ಪೌರಕಾರ್ಮಿಕರು ಪುರಸಭೆ ಮುಂಭಾಗದಲ್ಲಿ ಕುಳಿತು ಧರಣಿ ಆರಂಭಿಸುತ್ತಿದ್ದಂತೆ ಕರವೇ ಅಧ್ಯಕ್ಷ ಬಾಳು ಮುಳುಜಿ, ದಲಿತ ಮುಖಂಡ ಚಂದ್ರು ಹೊಸಮನಿ, ಬಿಜೆಪಿ ಮುಖಂಡರುಗಳಾದ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಮಲ್ಲಿಕಾರ್ಜುನ ಕಿವುಡೆ, ಪುರಸಭೆ ಸದಸ್ಯರಾದ ಭೀಮಾಶಂಕರ ಮೂರ್ಮನ, ಉಮೇಶ ದೇಗಿನಾಳ, ಜಹಾಂಗೀರ್ ಸೌದಾಗರ. ಶಬ್ಬೀರ್ ಕಾಜಿ, ಅಸ್ಲಾಂ ಕಡಣಿ, ಅಯ್ಯುಬ್ ಬಾಗವಾನ ಮುಸ್ತಾಕ್ ಇಂಡಿಕರ್ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

ಹುಚ್ಚಪ್ಪ ಶಿವಶರಣ, ಲಕ್ಷ್ಮೀ ಕಾಲೇಬಾಗಿ, ಚಂದು ಕಾಲೇಬಾಗ, ಕಲಾವತಿ ಕಾಳೆ, ಮಲ್ಲಪ್ಪ ನಡಗಡ್ಡಿ, ಲತಾ ಗುಡಮಿ, ಶ್ರೀಶೈಲ ಹಾದಿಮನಿ, ಮರೆಪ್ಪ ಗುಡಮಿ, ಅಸ್ಲಾಂ ಖಾದಿಮ್, ಪ್ರವೀಣ ಸೋನಾರ, ಮಲ್ಲಪ್ಪ ಕಂಟೀಕಾರ, ಮಾಳು ಹೆಳವರ, ನಿಂಬಣ್ಣ ರವಳಿ, ಮಲ್ಲಿಕಾರ್ಜುನ ಶಿವಶರಣ, ಶಶಿ ದೇವರ, ಶ್ರೀಶೈಲ ಗುಡ್ಲ, ಬಸು ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net