ಏಳನೇ ವೇತನ ಆಯೋಗ ಜಾರಿಗೊಳಿಸದಿದ್ದರೆ ಮುಷ್ಕರ ನಿಶ್ಚಿತ; ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ

SURESH SHADASHAL MANAVI
ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್‌ಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಹಾಗೂ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ರಾಜಶೇಖರ ದೈವಾಡಿ, ಜುಬೇರ ಕೆರೂರ, ಗಂಗಾಧರ ಜೇವೂರ ಮತ್ತಿತರರಿದ್ದಾರೆ.
Published on

ವಿಜಯಪುರ: ಏಳನೇ ವೇತನ ಆಯೋಗ ಜಾರಿಗೊಳಿಸದಿದ್ದರೆ ಜು.29 ರಂದು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಎಚ್ಚರಿಸಿದರು.

ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಅವರು, ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡದೇ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ವೇತನ ಆಯೋಗ ಜಾರಿಗೆ ತರದಿದ್ದರೆ ರಾಜ್ಯಾದ್ಯಂತ ಶಾಲೆ- ಕಾಲೇಜು, ಸರ್ಕಾರಿ ಕಚೇರಿ ಬಂದ್ ಮಾಡಿ, ಸೇವೆಗೆ ಗೈರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದರು.

ನಾಲ್ಕು ರಾಜ್ಯಗಳಲ್ಲಿ ಎನ್‌ಪಿಎಸ್ (ನೂತನ ಪಿಂಚಣಿ ಯೋಜನೆ) ರದ್ದು ಮಾಡಿ ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿ ಮಾಡಿದ್ದಾರೆ. ನಮ್ಮ್ಮ ರಾಜ್ಯದಲ್ಲೂ ಆಗಬೇಕು. ನೌಕರರು ಮಾರಣಾಂತಿಕ ಕಾಯಿಲೆಗೆ ಬಲಿಯಾಗುತ್ತಿದ್ದು, ಪ್ರತಿ ಕಾಯಿಲೆ ಚಿಕಿತ್ಸೆಗೆ ಒಳಪಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಬೇಕು. ಬರುವ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಿಸಬೇಕು. ನಮ್ಮ ನ್ಯಾಯಯುತ ಬೇಡಿಕೆ ಈಡೇರದಿದ್ದರೆ ಹೋರಾಟ ನಿಶ್ಚಿತ ಎಂದರು.

ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೈವಾಡಿ, ಖಜಾಂಚಿ ಜುಬೇರ ಕೆರೂರ, ಗಂಗಾಧರ ಜೇವೂರ, ವಿಜಯಕುಮಾರ ಹತ್ತಿ, ವಿಶ್ವನಾಥ ಬೆಳೆನ್ನವರ, ನೀಜು ಮೇಲಿನಕೇರಿ, ಜಗದೀಶ ಬೋಳಸೂರ, ಬಸೀರ ನದಾಪ್, ಚನ್ನಯ್ಯ ಮಠಪತಿ, ರವೀಂದ್ರ ಉಗಾರ, ಮುತ್ತಪ್ಪ ಪೂಜಾರಿ, ಉದಯ ಕೊಟ್ಯಾಳ, ರಾಮಣ್ಣಾ ಬೋಳೆಗಾರ, ಅಜೀಜ್ ಅರಳಿಮಟ್ಟಿ, ಬಸವರಾಜ ಗಿರಿನಿವಾಸ, ಎಂ.ಎಚ್.ಚಿತ್ತರಗಿ, ಫಯಾಜ್ ತಮದಡ್ಡಿ, ಎಸ್.ಎಚ್. ಪಿಂಜಾರ್, ಎಸ್.ಎಸ್. ತೆರದಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net