ಕಾರ್ಮಿಕರ ಸಂಘದಿಂದ ಧರಣಿ

New Project (10)
Published on

ಕಾಸರಗೋಡು: ಅಖಿಲ ಕೇರಳ ವಾಹನ ಚಾಲನಾ ತರಬೇತಿ ಕೇಂದ್ರದ ಕಾರ್ಮಿಕರ ಸಂಘ (ಎಕೆಡಿಎಸ್‌ಯು) ವತಿಯಿಂದ ವಿವಿಧ ಬೇಡಿಕೆ ಮುಂದಿರಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.

ವಾಹನ ಚಾಲನಾ ತರಬೇತಿ ಕೇಂದ್ರದ ಕಾರ್ಮಿಕರ ವಿರುದ್ಧ ಸಾರಿಗೆ ಸಚಿವರು ತೋರುತ್ತಿರುವ ಕಾರ್ಮಿಕ ವಿರೋಧಿ ಧೋರಣೆ ಕೊನೆಗೊಳಿಸಬೇಕು, ಸರ್ಕಾರ ವಾಹನ ಚಾಲನಾ ತರಬೇತಿ ಕೇಂದ್ರವನ್ನು ಉಳಿಸಬೇಕು. ಕೆಎಸ್‌ಆರ್‌ಟಿಸಿ ವಾಹನ ಚಾಲನಾ ತರಬೇತಿ ಶಾಲೆಯಲ್ಲಿ ಕಲಿತ ಚಾಲಕರಿಗೆ ಆರ್‌ಟಿಒ ನಿರ್ಧರಿಸಿದ ವಾಹನ ಚಾಲನಾ ಪರೀಕ್ಷಾ ಮೈದಾನದಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಮಾಡಬೇಕು ಮೊದಲಾದ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.

ಸಿಐಟಿಯು ಜಿಲ್ಲಾ ಸಮಿತಿ ಕಾರ್ಯದರ್ಶಿ ಗಿರಿಕೃಷ್ಣನ್ ಉದ್ಘಾಟಿಸಿದರು. ಅಖಿಲ ಕೇರಳ ವಾಹನ ಚಾಲನಾ ತರಬೇತಿ ಶಾಲಾ ಕಾರ್ಮಿಕರ ಒಕ್ಕೂಟ (ಸಿಐಟಿಯು) ಜಿಲ್ಲಾಧ್ಯಕ್ಷ ಪಿ.ವಿ. ಶ್ರೀಜಿತ್ ಅಧ್ಯಕ್ಷತೆ ವಹಿಸಿದ್ದರು ಮುಖಂಡರಾದ ಬಿ.ಸುರೇಶ್, ವಿ.ಕೆ.ಸ್ಮಿತಾ ಮತ್ತು ಟಿ.ಕೆ.ವಿನೋದ್ ಭಾಗವಹಿಸಿದ್ದರು. ಆಲ್ ಕೇರಳ ಡ್ರೈವಿಂಗ್ ಸ್ಕೂಲ್ ವರ್ಕರ್ಸ್ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಎಚ್.ಗುರುಪ್ರಸಾದ್ ಸ್ವಾಗತಿಸಿದರು. ಜಿಲ್ಲಾ ಸಮಿತಿ ಕೋಶಾಧಿಕಾರಿ ಆರ್.ಆರ್.ಮನೋಹರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net