ನಿತ್ಯದ ಕಾರ್ಯ ಸ್ಥಗಿತಗೊಳಿಸಿ ಮುಷ್ಕರ

28 HKR 03
Published on

ಹಿರೇಕೆರೂರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಪಪಂ ಕಚೇರಿ ಎದುರು ಪೌರ ನೌಕರರ ಸಂಘದ ವತಿಯಿಂದ ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಯಿತು.

ತಾಲೂಕು ಪೌರ ನೌಕರರ ಸಂಘದ ಅಧ್ಯಕ್ಷ ಭರಮಪ್ಪ ಕಡೇಮನಿ ಮಾತನಾಡಿ, ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ಸಮಾನ ಕೆಲಸಕ್ಕೆ ತಕ್ಕಂತೆ ವೇತನ ನೀಡಿ ನೌಕರರನ್ನು ಕಾಯಂಗೊಳಿಸಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು. ಪಟ್ಟಣದಲ್ಲಿ ನಿತ್ಯದ ಕಾರ್ಯಗಳನ್ನು ಸ್ಥಗಿತಗೊಳಿಸುವ ಮೂಲಕ ಮುಷ್ಕರ ನಡೆಸಲಾಗುತ್ತಿದ್ದು, ಬೇಡಿಕೆ ಈಡೇರುವವರೆಗೆ ಮುಂದುವರಿಸಲಾಗುವುದು ಎಂದರು.

ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿ ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ್ ಎನ್.ಟಿ,. ಅವರಿಗೆ ಮನವಿ ಸಲ್ಲಿಸಲಾಯಿತು.

ಪಪಂ ಅಧಿಕಾರಿಗಳಾದ ರಾಜೇಶ್ವರಿ ಹರಪನಹಳ್ಳಿ, ಮಮತಾ ಪಾಟೀಲ, ಸಿ.ಎಂ. ಪುಟ್ಟಕ್ಕಳವರ, ದೀಪಾ ಸವಣೂರ, ನಾಗರಾಜ ಶ್ಯಾಮನೂರ, ನಿರಂಜನ ಸಣ್ಣಪ್ಪಣನವರ, ಮಹೇಂದ್ರ ಮುದಿಯಣ್ಣನವರ, ಪೌರ ನೌಕರರಾದ ನಾಗರಾಜ ಮೇದೂರು, ನಾಗರಾಜ ಮಾಳಿ, ಚಂದ್ರಪ್ಪ ವಡ್ಡರ, ಶಿವು ಬಾಳಂಬೀಡ, ರವಿ ಬಾಳಂಬೀಡ, ಪ್ರವೀಣ ಮುಗಳಿಹಳ್ಳಿ, ಕುಮಾರ ಮುದಿಯಣ್ಣನವರ, ಲಕ್ಷ್ಮಣ ಬಾತವ್ವನವರ ಹಾಗೂ ನೌಕರರು ಇದ್ದರು.

***

ಪೊಟೊ ಶಿರ್ಷಿಕೆ 28ಎಚ್‌ಕೆಆರ್03

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಿರೇಕೆರೂರು ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ್ ಎನ್.ಟಿ., ಅವರಿಗೆ ಮನವಿ ಸಲ್ಲಿಸಲಾಯಿತು. ರಾಜೇಶ್ವರಿ ಹರಪನಹಳ್ಳಿ, ಮಮತಾ ಪಾಟೀಲ, ಸಿ.ಎಂ. ಪುಟ್ಟಕ್ಕಳವರ, ದೀಪಾ ಸವಣೂರ, ನಾಗರಾಜ ಶ್ಯಾಮನೂರ, ನಿರಂಜನ ಸಣ್ಣಪ್ಪಣನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net