

ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಕೇರಳ ಪಿಂಚಣಿದಾರರ ಸಂಘದ ಕಾಸರಗೋಡು ಬ್ಲಾಕ್ ಸಮಿತಿಯ ಆಶ್ರಯದಲ್ಲಿ ಕಾಸರಗೋಡು ಉಪಖಜಾನೆ ಎದುರು ಧರಣಿ ನಡೆಯಿತು.
ವೇತನ ಪರಿಷ್ಕರಣಾ ಆಯೋಗ ತಕ್ಷಣ ನೇಮಿಸಬೇಕು. ಮೆಡಿಸೇಫ್ ನ್ಯೂನ್ಯತೆಗಳನ್ನು ಸರಿಪಡಿಸಬೇಕು. ತಡೆಹಿಡಿಯಲಾದ ಬಾಕಿ ಮೊತ್ತ ಬಿಡುಗಡೆಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.
ಕೇರಳ ರಾಜ್ಯ ಪಿಂಚಣಿದಾರರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಈಶ್ವರ ರಾವ್ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಿ.ಕೇಶವ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಅಶೋಕ್ ಬಾಡೂರು, ಕೆ.ಶ್ರೀಧರ ರಾವ್, ಸವಿತಾ, ಬಲರಾಮ ಭಟ್, ಎಂ.ನಾರಾಯಣ, ಲೀಲಾವತಿ, ಕೇಶವ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಕೇರಳ ರಾಜ್ಯ ಪಿಂಚಣಿದಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ನಾಗರಾಜ ಸ್ವಾಗತಿಸಿದರು.