ಗೋವಾದಲ್ಲಿ ಕನ್ನಡಿಗರ ಮೇಲೆ‌ ದೌರ್ಜನ್ಯ- ಕರವೇ ಪ್ರತಿಭಟನೆ

Goa strike
Published on


ಕಾರವಾರ: ಲಾರಿ, ವಾಹನ ಚಾಲಕರ ಮೇಲೆ ಗೋವಾ ರಾಜ್ಯದಲ್ಲಿ ದೌರ್ಜನ್ಯ ನಡೆಯುತ್ತಿದ್ದು, ಅದನ್ನು ಖಂಡಿಸಿ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಗೋವಾ ಸಿಎಂ, ಹಾಗೂ ಅಲ್ಲಿನ ಸಂಘಟನೆಗಳ ಮುಖಂಡರ ವಿರುದ್ಧ ಘೋಷಣೆ ಕೂಗಿದರು.

ರೆವಲ್ಯೂಷನರಿ ಗೋವನ್ ಎಂಬ ಸಂಘಟನೆಯ ಕಾರ್ಯಕರ್ತರು ಗೋವಾಕ್ಕೆ ತೆರಳುವ ಕನ್ನಡದ ಹೂವು, ಹಣ್ಣಿನ ವ್ಯಾಪಾರಿಗಳಿಗೆ ಗೋವಾ ರಾಜ್ಯದಲ್ಲಿ ತೊಂದರೆ ಕೊಡುತ್ತಿದ್ದಾರೆ.ಅವರನ್ನು ಓಡಿಸುತ್ತಿದ್ದಾರೆ. "ಘಾಟಿ ಲೋಗ್" ಎಂದು ಬಯ್ಯುತ್ತಿದ್ದಾರೆ ಎಂಬ ಆರೋಪವಿದೆ.

ಗೋವಾ ರಾಜ್ಯದಲ್ಲಿ ಕನ್ನಡಿಗರಿಂದಲೇ ಪ್ರವಾಸೋದ್ಯಮ ಬೆಳೆಯುತ್ತಿದೆ ಎಂಬುದನ್ನು ಅಲ್ಲಿನ ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕು.
ಹಾಗೇನಾದರೂ ಮಾಡಿದಲ್ಲಿ ನಾವು ಗೋವಾ ಗಡಿ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರಿದರು.
ಸುನೀಲ ನಾಯ್ಕ ಮಾತನಾಡಿ, ಗೋವಾದ ವಾಹನಗಳನ್ನು ತಡೆಯಲಾಗುವುದು ಎಂದು ಎಚ್ಚರಿಸಿದರು.
ನರೇಂದ್ರ ತಳೇಕರ್, ಅರುಣ ಹರ್ಕಡೆ, ಸುನೀಲ‌ ಹೊನ್ನಿಕೇರಿ, ಮಂಜುನಾಥ ನಾಯ್ಕ, ವಿನಾಯಕ ನಾಯ್ಕ, ತಿಮ್ಮಪ್ಪ ನಾಯ್ಕ, ರಾಜಾ ನಾಯ್ಕ, ಶ್ರೀಪಾದ ಶೇಟ್, ಶಶಾಂಕ ಪ್ರತಿಭಟನೆಯಲ್ಲಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net