ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಜಾರಿಗೆ ಬರಲಿ

 ಸೋಮವಾರಪೇಟೆ ಹಿಂದು ಜನಜಾಗೃತಿ ಸಮಿತಿ ವತಿಯಿಂದ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರಸಾದ್, ಬಸವ ಕುಮಾರ್, ರಾಧಾಕೃಷ್ಣ ಇದ್ದರು.
ಸೋಮವಾರಪೇಟೆ ಹಿಂದು ಜನಜಾಗೃತಿ ಸಮಿತಿ ವತಿಯಿಂದ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರಸಾದ್, ಬಸವ ಕುಮಾರ್, ರಾಧಾಕೃಷ್ಣ ಇದ್ದರು.
Published on

ಸೋಮವಾರಪೇಟೆ: ಹಿಂದು ಹಬ್ಬಗಳ ಸಮಯದಲ್ಲಿ ಉದ್ದೇಶ ಪೂರ್ವಕವಾಗಿ ಗಲಭೆ ಸೃಷ್ಟಿಸಿದ ಘಟನೆಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ ಅರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಕಾನೂನು ರೂಪಿಸಬೇಕೆಂದು ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ತಹಸೀಲ್ದಾರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗೃಹ ಸಚಿವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿತು.

ಕರ್ನಾಟಕ, ಗುಜರಾತ್, ತೆಲಂಗಾಣ, ಮಧ್ಯಪ್ರದೇಶ, ಉತ್ತರಖಂಡ್ ಸೇರಿದಂತೆ ಇತರ ರಾಜ್ಯಗಳಲ್ಲಿ ಅನ್ಯಕೋಮಿನ ಜನರಿಂದ ಹಿಂದುಗಳ ಮೇಲೆ ಹಿಂಸಾತ್ಮಕ ದಾಳಿಗಳು ನಡೆಯುತ್ತಿದ್ದು, ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಯುಎಪಿಎ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಬೇಕು. ದಾಳಿಕೋರರಿಂದ ಸರ್ಕಾರಿ ಆಸ್ತಿಪಾಸ್ತಿಗೆ ಉಂಟಾದ ನಷ್ಟವನ್ನು ದಾಳಿಕೋರರಿಂದ ವಸೂಲಿ ಮಾಡುವ ಕಾನೂನು ಕರ್ನಾಟಕದಲ್ಲೂ ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.

ಸೆ.24ರಂದು ದಾವಣಗೆರೆಯಲ್ಲಿ ಅನ್ಯಕೋಮಿನವರು ಹಿಂದುಗಳ ಮನೆ ಮೇಲೆ ಕಲ್ಲು ತೂರಿದ್ದಾರೆ. ಗುಜರಾತ್‌ನ ಗಾಂಧಿ ನಗರದಲ್ಲೂ ಸಮಾಜಘಾತಕ ಶಕ್ತಿಗಳು ಕಲ್ಲುತೂರಿ ಪೊಲೀಸ್ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಇಂತಹ ಘಟನೆಗಳಿಂದಾಗಿ ದೇಶದ ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲು ಎದುರಾಗಿದ್ದು, ಸೂಕ್ತ ಕಾನೂನು ಕಾಯ್ದೆ ರೂಪಿಸಬೇಕೆಂದು ಒತ್ತಾಯಿಸಿದ್ದಾರೆ.

ಹಿಂದು ಜಾಗೃತಿ ಸಮಿತಿಯ ಪಿ.ಎಚ್.ಪ್ರಸಾದ್, ಬಸವಕುಮಾರ ಶಾಸ್ತ್ರಿ, ಎಂ.ಜಿ.ಸಾವಿತ್ರಿ, ಕೆ.ಜಿ.ರಾಧಕೃಷ್ಣ, ಪ್ರಸನ್ನ ಕುಮಾರ್ ತಾಕೇರಿ, ಜಗದೀಶ್, ಶಂಕರ, ಅಣ್ಣಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net