ಟೇಪ್ ಹಚ್ಚಿ ಗಾಡಿ ಓಡಿಸಿದಲ್ಲಿ ಕಟ್ಟುನಿಟ್ಟಿನ ಕ್ರಮ

bdm 22-1 new
ಬಾದಾಮಿಯ ನಿರಾಣಿ ಶುಗರ್ಸ್‌ನಲ್ಲಿ ಪಿಎಸ್‌ಐ ವಿಠ್ಠಲ ನಾಯಕ ಟ್ರಾೃಕ್ಟರ್ ಚಾಲಕರಿಗೆ ರಸ್ತೆ ನಿಯಮ ಪಾಲನೆಗೆ ಪಾಠ ತೆಗೆದುಕೊಂಡರು.
Published on

ಬಾದಾಮಿ: ಕಾರ್ಖಾನೆಗೆ ಕಬ್ಬು ಸಾಗಿಸುವ ಟ್ರಾೃಕ್ಟರ್ ಚಾಲಕರು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಜತೆಗೆ ಸಾರ್ವಜನಿಕರ ಜೀವ ರಕ್ಷಣೆ ಮಾಡಬೇಕೆಂದು ಪಿಎಸ್‌ಐ ವಿಠ್ಠಲ ನಾಯಕ ಹೇಳಿದರು.

ಇಲ್ಲಿನ ನಿರಾಣಿ ಸಮೂಹ ಸಂಸ್ಥೆಯ ಬಾದಾಮಿ ಶುಗರ್ಸ್‌ನಲ್ಲಿ ಚಾಲಕರಿಗೆ ರಸ್ತೆ ನಿಯಮ ಪಾಲನೆ ಕುರಿತು ಅವರು ಮಾತನಾಡಿದರು.

ಇತ್ತೀಚೆಗೆ ಚಾಲಕರು ಹೆಚ್ಚಿನ ಸೌಂಡ್ ಮೂಲಕ ಟ್ರಾೃಕ್ಟರ್ ಚಾಲನೆ ಮಾಡುತ್ತಿರುವುದು ಕಂಡು ಬಂದಿದೆ. ಜತೆಗೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಿಸುವುದನ್ನೂ ಗಮನಿಸಲಾಗಿದೆ. ಇನ್ನು ಮುಂದೆ ಚಾಲಕರು ತಮ್ಮ ಜೀವ ಮತ್ತು ನಿಮ್ಮ ಕುಟುಂಬದ ಬಗ್ಗೆ ಅರಿವು ಇಟ್ಟುಕೊಳ್ಳಬೇಕು ಎಂದು ಎಚ್ಚರಿಸಿದರು.

ಹೆಚ್ಚಿನ ಸೌಂಡ್‌ನಿಂದ ಅಪಘಾತಗಳು ಸಂಭವಿಸುತ್ತವೆ. ರಸ್ತೆಯಲ್ಲಿ ಟೇಪ್ ಹಚ್ಚಿಕೊಂಡಲ್ಲಿ ಕ್ರಮ ಕಡ್ಡಾಯ. ಶಾಲೆ, ಕೋರ್ಟ್ ಸೇರಿ ಸಿಟಿಯಲ್ಲಿ ಎದ್ವಾತದ್ವಾ ಓಡಿಸಿದ್ದು ಕಂಡು ಬಂದಲ್ಲಿ ಟ್ರಾೃಕ್ಟರ್ ಸೀಜ್ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಶುಗರ್ಸ್‌ ಜನರಲ್ ಮ್ಯಾನೇಜರ್ ರವೀಂದ್ರ ಕುಂಬಾರ, ಕಬ್ಬು ವಿಭಾಗದ ಮುಖ್ಯಸ್ಥ ಗಿರೀಶ ಪಾಟೀಲ, ರಮೇಶ ಮಣ್ಣೂರ, ವಿನೋದ ಬೊಮ್ಮನಗೌಡರ, ಸಂತೋಷ ನಾಯಕ, ರಮೇಶ ವೆಂಕನಗೌಡ್ರ, ರಮೇಶ ನೀರಲಕೇರಿ, ಮರಿಯಪ್ಪ ಸಂಕದಾಳ, ಶಿವನಗೌಡ ಪಾಟೀಲ ಸೇರಿ ಟ್ರಾೃಕ್ಟರ್ ಚಾಲಕರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net