

ಹುಬ್ಬಳ್ಳಿ: ಇಲ್ಲಿನ ರಾಯಾಪುರದ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದಲ್ಲಿ ಬುಧವಾರ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ವೈಜ್ಞಾನಿಕ ಅಧಿಕಾರಿ ದಿನೇಶ ನಾಯಕ್ ಉದ್ಘಾಟಿಸಿ ಮಾತನಾಡಿ, ಆಗಾಗ ವಾಹನಗಳನ್ನು ತಪಾಸಣೆ ಮಾಡಿಸಿಕೊಂಡಿರಬೇಕು. ವಾಯು ಮಾಲಿನ್ಯ ಉಂಟಾಗದಂತೆ ಎಚ್ಚರವಹಿಸಬೇಕು. ಪರಿಸರಕ್ಕೆ ಧಕ್ಕೆಯಾದರೆ ವಾಹನಗಳು ಮತ್ತು ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಯು ಮಾಲಿನ್ಯ ನಿಯಂತ್ರಿಸಲು ಸಾರ್ವಜನಿಕರು ಬ್ಯಾಟರಿ ಚಾಲಿತ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು. ಸಮೂಹ ಸಾರಿಗೆಯಲ್ಲಿ ಸಂಚರಿಸಬೇಕು ಎಂದರು.
ಧಾರವಾಡ ಹೈಕೋರ್ಟ್‌ನ ಹಿರಿಯ ಸಹಾಯಕ ರಾಮಕೃಷ್ಣ ನಾಯಕ್, ಧಾರವಾಡ ಪಶ್ಚಿಮ ಆರ್‌ಟಿಒ ಭೀಮನಗೌಡ ಪಾಟೀಲ, ಧಾರವಾಡ ಪೂರ್ವ ಆರ್‌ಟಿಒ ಕೆ. ದಾಮೋದರ ಮಾತನಾಡಿದರು.
ಮೋಟಾರು ವಾಹನಗಳ ಹಿರಿಯ ನಿರೀಕ್ಷಕರಾದ ಪಿ.ಆರ್.ದೇಸಾಯಿ, ಎಸ್.ಡಿ. ಬೆಲ್ಲದ್, ಅಧೀಕ್ಷಕಿ ಪದ್ಮಾವತಿ ಮರೆಣ್ಣವರ, ನಾಗರಾಜ ಶೇಳಗಿ, ಸಿಬ್ಬಂದಿ ಸಚಿನ್ ಹುಲಕೋಟಿ, ಎಂ.ಎಫ್. ಬನಹಟ್ಟಿ ಇತರರು ಇದ್ದರು.