ಪಬ್, ಡ್ಯಾನ್ಸ್ ಬಾರ್‌ಗಳ ಕಡಿವಾಣಕ್ಕೆ ಆಗ್ರಹ

MNg-26 July VHP
Published on

ಮಂಗಳೂರು: ನಗರದಾದ್ಯಂತ ಪಬ್ ಡ್ಯಾನ್ಸ್ ಬಾರ್‌ಗಳಲ್ಲಿ ಕಾನೂನು ಮೀರಿ ಚಟುವಟಿಕೆಗಳು ನಡೆಯುತ್ತಿದ್ದು ಕಡಿವಾಣ ಹಾಕುವಂತೆ ವಿಶ್ವಹಿಂದೂ ಪರಿಷತ್ ಮುಖಂಡರು ಶಾಸಕ ವೇದವ್ಯಾಸ ಕಾಮತ್ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.


ಪಾರ್ಟಿಯ ಹೆಸರಿನಲ್ಲಿ ಡ್ರಗ್ಸ್, ಗಾಂಜಾ, ಅಮಲು ಪದಾರ್ಥಗಳ ಸೇವನೆಯೊಂದಿಗೆ ಪಬ್ ಬಾರ್‌ಗಳು ಅನೈತಿಕ ಕೇಂದ್ರವಾಗುತ್ತಿದೆ. ಈ ಚಟುವಟಿಕೆಯಿಂದ ಹದಿಹರೆಯದ ಯುವಕ ಯುವತಿಯರು ಬಲಿಯಾಗುತ್ತಿದ್ದು ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಪಾರ್ಟಿಯ ಹೆಸರಿನಲ್ಲಿ ತಡರಾತ್ರಿ ತನಕ ಪಬ್ಗಳನ್ನು ತೆರೆದು ಮೋಜು ಮಸ್ತಿ ನಡೆಸುತ್ತಿದ್ದಾರೆ. ಆದ್ದರಿಂದ ತಕ್ಷಣ ಪೊಲೀಸ್ ಇಲಾಖೆ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುವ ಎಲ್ಲ ಪಬ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಗ್ರಹಿಸಿದೆ.

ವಿಶ್ವಹಿಂದು ಪರಿಷತ್ ರಾಜ್ಯ ಮುಖಂಡ ಶರಣ್ ಪಂಪ್‌ವೆಲ್, ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಸಂಯೋಜಕ ಪುನೀತ್ ಅತ್ತಾವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net