ಓವರ್ ಲೋಡ್ ಮರಳು ಸಾಗಣೆ ವಿರುದ್ಧ ಕಠಿಣ ಕ್ರಮ

04-03-Shiva-2
ರಾಯಚೂರಿನ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಕಾರಿ ಚಂದ್ರಶೇಖರ ನಾಯಕ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ಮರಳು ನೀತಿ ಸಮಿತಿ ಸಭೆ ಜರುಗಿತು. ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಎಸ್ಪಿ ಬಿ.ನಿಖಿಲ್, ತಹಸೀಲ್ದಾರ್ ಸುರೇಶ ವರ್ಮಾ, ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಅಕಾರಿ ಪುಷ್ಪಲತಾ, ಆರ್‌ಟಿಒ ಜಿ.ಟಿ.ವಿನಯಾ ಇದ್ದರು.
Published on

ರಾಯಚೂರು: ಮರಳು ಸಾಗಣೆ ಪರವಾನಗಿ ಹೊಂದಿರುವ ಗುತ್ತಿಗೆದಾರರು ರಾತ್ರಿ ಸಮಯದಲ್ಲಿ ಹಾಗೂ ವಾಹನದಲ್ಲಿ ನಿಗದಿಗಿಂತ ಹೆಚ್ಚಿನ ಭಾರದ ಮರಳು ಸಾಗಿಸಿದರೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಕಾರಿ ಚಂದ್ರಶೇಖರ ನಾಯಕ ಅಕಾರಿಗಳಿಗೆ ಸೂಚಿಸಿದರು.
ಸ್ಥಳೀಯ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಮಟ್ಟದ ಮರಳು ನೀತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮರಳು ಸಾಗಣೆಗೆ ಹೊಸದಾಗಿ ಪರ್ಮಿಟ್ ನೀಡಿದಲ್ಲಿ ಗುತ್ತಿಗೆದಾರರ ಲೈಸನ್ಸ್ ರದ್ದುಪಡಿಸಬೇಕು ಎಂದು ತಿಳಿಸಿದರು.
ಪರವಾನಗಿ ಇಲ್ಲದೆ ಹಾಗೂ ರಾತ್ರಿ ಸಮಯ ಮೀರಿ ಮರಳು ಸಾಗಣೆ ಮಾಡುವ ಲಾರಿಗಳನ್ನು ತನಿಖಾ ಠಾಣೆಗಳಲ್ಲಿ ಪರಿಶೀಲನೆ ನಡೆಸಬೇಕು. ನದಿ ಪಾತ್ರದಲ್ಲಿ ಸಂಬಂಸಿದ ಇಲಾಖೆಗಳಿಂದ ಮರಳು ಬ್ಲಾಕ್ ಗುರುತಿಸಿ ಇ ಹರಾಜು ಮೂಲಕ ವಿಲೇವಾರಿ ಮಾಡಬೇಕು. ಈಗಾಗಲೇ ಗುರುತಿಸಿರುವ 12 ಬ್ಲಾಕ್‌ಗಳಿಗೆ ತಾಲೂಕು ಮಟ್ಟದ ಸಮಿತಿಯಲ್ಲಿ ಅನುಮೋದನೆ ಪಡೆಯಬೇಕು.
ಜಿಲ್ಲೆಯ ಕೃಷ್ಣಾ ಮತ್ತು ತುಂಗಭದ್ರ ನದಿ ಪಾತ್ರದಲ್ಲಿ ಅನಕೃತ ಮರಳು ಗಣಿಗಾರಿಕೆ ಮತ್ತು ಸಾಗಣೆ ಕುರಿತು ತಾಲೂಕು ಮಟ್ಟದ ವಿಜಿಲೆನ್ಸ್ ತಂಡ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು. ಮರಳು ಅಕ್ರಮ ಸಾಗಣೆ ದೂರು ಬಂದಲ್ಲಿ ಕಾರ್ಯಾಚರಣೆ ನಡೆಸಿ ಕ್ರಮಕೈಗೊಳ್ಳಬೇಕು.
ಕಂಕರ್ ಕ್ರಷರ್ ಆರಂಭಕ್ಕೆ ಪರವಾನಗಿಗಾಗಿ ಬಂದ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕು. ಸ್ಥಳ ಪರಿಶೀಲನೆ ನಡೆಸಿ ಕ್ರಷರ್ ಆರಂಭದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ತೊಂದರೆಯಾಗುವ ಬಗ್ಗೆ ಮಾಹಿತಿ ಪಡೆದು ಪರವಾನಗಿ ನೀಡಬೇಕು ಎಂದು ಚಂದ್ರಶೇಖರ ನಾಯಕ ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಎಸ್ಪಿ ಬಿ.ನಿಖಿಲ್, ತಹಸೀಲ್ದಾರ್ ಸುರೇಶ ವರ್ಮಾ, ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಅಕಾರಿ ಪುಷ್ಪಲತಾ, ಆರ್‌ಟಿಒ ಜಿ.ಟಿ.ವಿನಯಾ ಹಾಗೂ ವಿವಿಧ ಇಲಾಖೆ ಅಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net