ಒತ್ತಡ ನಿವಾರಣೆಗೆ ಯೋಗ ಸಹಕಾರಿ

16Athani1
Published on

ಅಥಣಿ: ದೇಹ, ಮನಸ್ಸು ನಿಯಂತ್ರಿಸಲು ಯೋಗ ಸಹಾಯ ಮಾಡುತ್ತದೆ ಎಂದು ರಾಜ್ಯ ಯೋಗ ಪ್ರಭಾರಿ ಯೋಗಾಚಾರ್ಯ ಭವರಲಾಲ ಆರ್ಯ ಹೇಳಿದರು.

ಪಟ್ಟಣದ ಆರ್.ಎಂ.ಡಾಂಗೆ ನರ್ಸಿಂಗ್ ಶಾಲೆ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಿತ್ಯ ಆಚರಣೆಯಿಂದ ಲಾಭ ಹೊಂದಲು ಸಾಧ್ಯ. ಒತ್ತಡ ಮತ್ತು ಆತಂಕ ನಿವಾರಣೆಗೆ ಯೋಗ ಸಹಾಯ ಮಾಡುತ್ತದೆ ಎಂದರು.

ಉತ್ತರ ಕರ್ನಾಟಕದ ಯೋಗ ಪ್ರಭಾರಿ ಕಿರಣ ಮನೋಳ್ಕರ ಮಾತನಾಡಿ, ಪತಂಜಲಿ ಯೋಗಪೀಠದ ರಾಮದೇವಜಿ ಮಹಾರಾಜರ ಪ್ರೇರಣೆಯಿಂದ ಅಥಣಿಯಲ್ಲಿ ಯೋಗ ಶಿಕ್ಷಕರ ತರಬೇತಿ ಶಿಬಿರ ಯಶಸ್ವಿಯಾಗಿದೆ. ಅಥಣಿ ಪಟ್ಟಣವನ್ನು ಯೋಗಮಯ ಮಾಡುವ ಆಸಕ್ತಿ ಹೊಂದಿದ್ದೇವೆ ಎಂದು ತಿಳಿಸಿದರು.

ಸಮಾಜ ಸೇವಕ ರಫೀಕ್ ಡಾಂಗೆ ಅವರಿಗೆ ಯೋಗ ಶಿಬಿರದಿಂದ ಸಮಾಜ ಸೇವಾರತ್ನ ಪ್ರಶಸ್ತಿ, ಯೋಗ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಎಸ್.ಕೆ.ಹೊಳೆಪ್ಪನವರ, ಎ.ಬಿ.ಪಾಟೀಲ, ಶಿವಾನಂದ ಮಾಲಗಾವಿ, ಬಾಲಕೃಷ್ಣ ಕೊಳೇಕರ, ಸುರೇಶ ಚಿಕ್ಕಟ್ಟಿ, ಡಾ.ವಿನಾಯಕ ಚಿಂಚೊಳಿಮಠ, ಶ್ರೀಶೈಲ ಪಾಟೀಲ, ಅಪ್ಪಾಸಾಹೇಬ ತಾಂಬಟ, ಆರ್.ಎಸ್.ದೊಡ್ಡನಿಂಗಪ್ಪಗೋಳ, ಜ್ಯೋತಿ ಪಾಟೀಲ, ಸದಾಶಿವ ಚಿಕ್ಕಟ್ಟಿ, ಸುರೇಖಾ ತಾಂಬಟ, ರಾವಸಾಹೇಬ ಬಿರಾದಾರಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net