ನಿರಂತರ ಯೋಗಾಭ್ಯಾಸದಿಂದ ಒತ್ತಡ ನಿವಾರಣೆ

mng_14 oct yoga
ಮಂಗಳೂರು ಉತ್ತರ ರೋಟರಿ ಬಾಲಭವನ ಮಣ್ಣಗುಡ್ಡೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಮಂಗಳೂರು ಉತ್ತರ ರೋಟರಿ ಕ್ಲಬ್ ಆಯೋಜಿಸಿದ 30 ದಿನಗಳ ಉಚಿತ ಯೋಗ ತರಬೇತಿ ಶಿಬಿರ ನೆರವೇರಿತು.
Published on

ಮಂಗಳೂರು: ಯೋಗಾಭ್ಯಾಸವನ್ನು ನಿರಂತರವಾಗಿ ಮಾಡುವುದರಿಂದ ಮಾನಸಿಕ ಒತ್ತಡದಂತಹ ಕಾಯಿಲೆಗಳನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಸಾಧ್ಯ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ರೋಟೇರಿಯನ್ ವಿಕ್ರಮ್ ದತ್ತ ಹೇಳಿದರು.

ಮಂಗಳೂರು ಉತ್ತರ ರೋಟರಿ ಬಾಲಭವನ ಮಣ್ಣಗುಡ್ಡೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಮಂಗಳೂರು ಉತ್ತರ ರೋಟರಿ ಕ್ಲಬ್ ಆಯೋಜಿಸಿದ 30 ದಿನಗಳ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ರೋಟರಿ ಸಂಸ್ಥೆಯು ಯೋಗದಿಂದ ಆಗುತ್ತಿರುವ ಪ್ರಯೋಜನಗಳನ್ನು ಅರಿತು ಯೋಗಾಭ್ಯಾಸವನ್ನೂ ತನ್ನ ಯೋಜನೆಗಳಲ್ಲಿ ಒಂದು ಮುಖ್ಯ ಯೋಜನೆಯಾಗಿ ಅಂಗೀಕರಿಸಿದೆ. ಅದರ ಭಾಗವಾಗಿ ಇಂದು 30 ದಿನಗಳ ಯೋಗ ಶಿಬಿರದ ಉದ್ಘಾಟನೆ ಆಗಿದೆ. ತಾವು ಮಾತ್ರವಲ್ಲದೆ ತಮ್ಮ ಬಂಧು ಮಿತ್ರರನ್ನೆಲ್ಲ ಈ ಶಿಬಿರಕ್ಕೆ ಕರೆತಂದು ಈ ಶಿಬಿರದ ಸಂಪೂರ್ಣ ಉಪಯೋಗ ಮಾಡಿಕೊಳ್ಳಬೇಕು ಎಂದರು.

ಮಂಗಳೂರು ಉತ್ತರ ಕ್ಲಬ್‌ನ ಅಧ್ಯಕ್ಷ ಮೋಹನ್ ನಾಯರ್ ಅವರು ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಯೋಗ ಯೋಜನೆಯ ಜಿಲ್ಲಾ ಅಧ್ಯಕ್ಷ ಜೆ. ವಿ. ಶೆಟ್ಟಿ, ಶ್ರೀಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಯೋಗೀಶ್ ಶೆಟ್ಟಿ, ಪ್ರತಿಷ್ಠಾನದ ಕಾರ್ಯದರ್ಶಿ ಧನಂಜಯ ಮತ್ತು ರೋಟರಿ ಸಂಸ್ಥೆಯ ಉಪ ರಾಜ್ಯಪಾಲ ವಿಶ್ವನಾಥ ಶೆಟ್ಟಿ ಎಂ., ರೋಟರಿ ಸಂಸ್ಥೆಯ ಸಾಪ್ತಾಹಿಕ ಸಂಚಿಕೆಯ ಸಂಪಾದಕ ಅಜಿತ್ ರಾವ್ ಸೇರಿದಂತೆ ಹಲವರು ಇದ್ದರು.

ಸುಮತಿ ಶೆಟ್ಟಿ ಪ್ರಾರ್ಥನೆ ನೆರವೇರಿಸಿದರು, ಪ್ರತಿಷ್ಠಾನದ ಉಪಾಧ್ಯಕ್ಷ ಪರಮೇಶ್ವರ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net