ಯೋಗದಿಂದ ಒತ್ತಡ ನಿವಾರಣೆ

h22-nwksrtc yoga
Published on

ಹುಬ್ಬಳ್ಳಿ: ಹುಬ್ಬಳ್ಳಿ-ದಾರವಾಡ ನಗರ ಸಾರಿಗೆ ವಿಭಾಗ ಹಾಗೂ ಇನ್ನರ್ ವೀಲ್ ಕ್ಲಬ್ ಹಾಗೂ ಮಿಡ್ ಟರ್ಮ್ ಸಹಯೋಗದಲ್ಲಿ ಇಲ್ಲಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಿ.ಆರ್.ಟಿ.ಎಸ್ ಘಟಕದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವಾಕರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಎಂ. ಪ್ರಿಯಾಂಗಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗವನ್ನು ನಿತ್ಯವೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಒತ್ತಡ ನಿವಾರಣೆ ಆಗುವುದಲ್ಲದೇ ಯಾವುದೇ ರೋಗಗಳು ನಿಮ್ಮನ್ನು ಬಾಧಿಸುವುದಿಲ್ಲ ಎಂದರು.

ನಿರ್ವಾಹಕ ರಮೇಶ ಕುರಿ ಯೋಗಾಸನಗಳನ್ನು ತಿಳಿಸಿಕೊಟ್ಟರು.

ಪ್ರಮುಖರಾದ ಪಿ.ವೈ. ನಾಯಕ, ಎಂ. ಸಿದ್ಧಲಿಂಗೇಶ, ಬಿ. ಬೋರಯ್ಯ, ಶಶಿಧರ ಕುಂಬಾರ, ಸುನೀಲ್.ಎಂ., ನವೀನಕುಮಾರ ತಿಪ್ಪ, ದಯಾನಂದ ಪಾಟೀಲ, ಎಸ್.ಎ. ಬೀಳಗಿ, ಜಗದೀಶ ಕೋಳಿ, ಮಹೇಶ್ವರಿ ಬೈಲಪತ್ತಾರ, ವಿನಾಯಕ ಸಾಲಿಮಠ, ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net