ಸಾಕು ಪ್ರಾಣಿಗಳಿಂದ ಒತ್ತಡ ನಿವಾರಣೆ: ಡಾ.ಜಿ.ಪಂಪಾಪತಿ

27 Jaggu 2
ಬೆಳಗಾವಿ ಅಯೋಧ್ಯ ನಗರದಲ್ಲಿ ಭಾನುವಾರ ಸೋಲಮೇಟ್ಸ್​ ವೆಟ್​ "ಸಾಕು ಪ್ರಾಣಿಗಳ ಸೂಪರ್​ ಸ್ಪೆಷಾಲಿಟಿ' ಆಸ್ಪತ್ರೆಯನ್ನು ಭಾನುವಾರ ಪಶು ವೈದ್ಯಕಿಯ ಶಸ ಚಿಕಿತ್ಸಕ ಡಾ.ಜಿ.ಪಂಪಾಪತಿ ಉದ್ಘಾಟಿಸಿದರು. ಡಾ ವಿಜಯಲಕ್ಷಿ$್ಮ, ಡಾ ಶಶಿಕಾಂತ ಕುಲಗೋಡ, ಡಾ ವೈ.ಬಿ.ಕುಲಗೋಡ, ಡಾ ಅನಿಲ್​ ಕುಮಾರ ಇದ್ದರು.
Published on

ಬೆಳಗಾವಿ: ಸಾಕು ಪ್ರಾಣಿಗಳು ಕುಟುಂಬಗಳಲ್ಲಿ ಸದಸ್ಯರಾಗುತ್ತಿವೆ. ಬೆಕ್ಕು ಮತ್ತು ನಾಯಿಗಳಂತಹ ಸಾಕು ಪ್ರಾಣಿಗಳಿದ್ದರೆ ಒತ್ತಡ ನಿವಾರಣೆಯಾಗುತ್ತದೆ ಎಂದು ಪಶು ವೈದ್ಯಕಿಯ ಶಸ ಚಿಕಿತ್ಸಕ ಡಾ.ಜಿ.ಪಂಪಾಪತಿ ಹೇಳಿದರು.

ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಅಯೋಧ್ಯ ನಗರದಲ್ಲಿ ಹೈಟೆಕ್​ ಶಸ ಚಿಕಿತ್ಸಾ ಸೌಲಭ್ಯ ಒಳಗೊಂಡಿರುವ ಸೋಲಮೇಟ್ಸ್​ ವೆಟ್​ "ಸಾಕು ಪ್ರಾಣಿಗಳ ಸೂಪರ್​ ಸ್ಪೆಷಾಲಿಟಿ' ಆಸ್ಪತ್ರೆ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಐದು ವರ್ಷಗಳ ಹಿಂದೆ ಆಸ್ಪತ್ರೆ ಸಂಸ್ಥಾಪಕಿ ಡಾ.ವಿಜಯಲಕ್ಷಿ$್ಮ ಕುಲಗೊಡ ಬೆಳಗಾವಿಯಲ್ಲಿ ಸಾಕುಪ್ರಾಣಿ ಆಸ್ಪತ್ರೆ ಪ್ರಾರಂಭಿಸುವ ಆಲೋಚನೆಯೊಂದಿಗೆ ಬೆಂಗಳೂರಿಗೆ ನನ್ನ ಬಳಿ ಬಂದಿದ್ದರು. ಈಗ ಅತ್ಯಾಧುನಿಕ ಮತ್ತು ಸುಸಜ್ಜಿತ ಸಾಕುಪ್ರಾಣಿ ಆಸ್ಪತ್ರೆ ಉದ್ಘಾಟಿಸಲು ನನಗೆ ಸಂತೋಷವಾಗಿದೆ ಎಂದರು.

ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ, ಸಿಇಒ ಡಾ.ವಿಜಯಲಕ್ಷಿ$್ಮ ಕುಲಗೋಡ, ಡಾ.ಶಶಿಕಾಂತ ಕುಲಗೋಡ ಮಾತನಾಡಿ, ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೋಗ ರ್ನಿಣಯ ಸೌಲಭ್ಯ, ಆಪರೇಷನ್​ ಥಿಯೇಟರ್​ ಮತ್ತು ತುರ್ತು ಸೇವೆಗಳು ಇವೆ.

ಆಸ್ಪತ್ರೆಯ ಸಲಹೆಗಾರರು ಮತ್ತು ಪಶು ವೈದ್ಯಕಿಯ ಶಸಚಿಕಿತ್ಸಕ ಡಾ.ಅವಿನಾಶ ಭೀರ್ಡೆ, ಡಾ.ಅನಿಲ್​ ಕುಮಾರ ಜಾಮಿ, ಸರ್ಕಾರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉಪನಿರ್ದೇಶಕ ಡಾ.ಶಶಿಧರ ನಾಡಗೌಡ, ಕರ್ನಾಟಕ ಪಶುವೈದ್ಯಕಿಯ ಸಂದ ಮಾಜಿ ಅಧ್ಯ ಡಾ.ವಿಶ್ವನಾಥ ಬಂಟಿ, ಖ್ಯಾತ ಪಶು ವೈದ್ಯಾಧಿಕಾರಿ ಡಾ.ಸುಧಾ ನಾಡಗೌಡ, ಡಾ.ಹೇಮಂತ್​ ಸಾಣಕ್ಕಿ, ಡಾ.ಶ್ರೀಕಾಂತ್​ ಗಾಂವಿ, ಆಸ್ಪತ್ರೆಯ ಆಡಳಿತಾಧಿಕಾರಿ ರೂಪ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net