ಒತ್ತಡ ನಿರ್ವಹಣೆ ಕಾರ್ಯಾಗಾರ

02 Jaggu 9
ರೋಟರಿ ಕ್ಲಬ್ ಆ್ ಬೆಳಗಾವಿ ದರ್ಪಣನಲ್ಲಿ ಭಾನುವಾರ ಆಯೋಜಿಸಿದ್ದ ಒತ್ತಡ ನಿರ್ವಹಣೆಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅಂಗನವಾಡಿ ಶಿಕ್ಷಕಿಯರು.
Published on

ಬೆಳಗಾವಿ: ರೋಟರಿ ಕ್ಲಬ್ ಬೆಳಗಾವಿ ದರ್ಪಣ ಹಾಗೂ ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಅಂಗನವಾಡಿ ಶಿಕ್ಷಕಿಯರಿಗಾಗಿ ಭಾನುವಾರ ಒತ್ತಡ ನಿರ್ವಹಣೆಯ ಕಾರ್ಯಾಗಾರ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೋಟರಿಯನ್ ಡಾ.ಸೂರ್ತಿ ಮಾಸ್ತಿಹೊಳ್ಳಿ ಅವರು ಒತ್ತಡ ಸುಲಭವಾಗಿ ನಿಭಾಯಿಸುವ ಸಲಹೆ ನೀಡಿದರು. 70ಕ್ಕೂ ಹೆಚ್ಚು ಅಂಗನವಾಡಿ ಶಿಕ್ಷಕಿಯರು ಪಾಲ್ಗೊಂಡಿದ್ದರು. ರೋಟೆರಿಯನ್ ರೂಪಾಲಿ ಜನಜ್ ಸ್ವಾಗತಿಸಿದರು.

ರೋಟೆರಿಯನ್‌ಗಳಾದ ಊರ್ಮಿಳಾ ಗಣಿ, ಸವಿತಾ ವೇಸಾನೆ, ಸಿಡಿಪಿಒ ಇಲಾಖೆಯ ಹಿರಿಯ ಮೇಲ್ವಿಚಾರಕಿ ಜ್ಯೋತಿ, ರಾಜಶ್ರೀ ಸೌದಿ ಉಪಸ್ಥಿತರಿದ್ದರು. ರೋಟೆರಿಯನ್ ದಿವ್ಯಾ ಮುದಿಗೌಡರ ಕಾರ್ಯಾಗಾರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net