

ಕೊಟ್ಟೂರು: ಎಂತಹ ತೊಂದರೆ ಇದ್ದರೂ ದೇವರ ಮೊರೆ ಹೋದರೆ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಸಿಬಿಐ ಡಿವೈಎಸ್ಪಿ ಕೆ.ಎಂ. ಸಂತೋಷ ಹೇಳಿದರು.
ಪಟ್ಟಣದ ಚಾನುಕೋಟಿ ಮಠದಲ್ಲಿ ಶನಿವಾರ ಷಷ್ಠಿ ಪೂರ್ಣ ಹಾಗೂ ಪಂಚಾಚಾರ್ಯ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾನು ಪ್ರತಿ ನಿತ್ಯ ಲಿಂಗಪೂಜೆ ಮಾಡುತ್ತೇನೆ. ಇದರಿಂದ ಕೆಲಸದ ಒತ್ತಡ ಖಂಡಿತ ಕಡಿಮೆಯಾಗುತ್ತದೆ. ಇದು ವೈಜ್ಞಾನಿಕವಾಗಿ ಸತ್ಯವಾಗಿದ್ದು ನೀವುಗಳು ಇದನ್ನು ಅನುಸರಿಸಿ ಎಂದರು.
ನನಗೆ ಉಜ್ಜಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಾಶಿ ಪೀಠದ ಹಿರಿಯ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕೃಪಾಶೀರ್ವಾದವೇ ನನ್ನ ಬೆಳವಣಿಗೆಗೆ ಕಾರಣ ಎಂದರು.
ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವಪೂಜೆ ಮಾಡಿದರೆ ಯಾವುದೇ ದೋಷಗಳು ಬರುವುದಿಲ್ಲ. ಪಾದೋದಕ ಅಮೃತಕ್ಕೆ ಸಮ. ನೀವೆಲ್ಲರೂ ಕಡ್ಡಾಯವಾಗಿ ಶಿವಪೂಜೆ ಮಾಡಬೇಕು. ಗುರು ದೀಕ್ಷೆ ಪಡೆದು ಲಿಂಗಪೂಜೆ ಮಾಡಿದರೆ 84 ಲಕ್ಷ ಜೀವರಾಶಿಯಲ್ಲಿ ಮೊದಲಿಗನಾಗಿ ಜನಿಸುತ್ತೇವೆ ಎಂದರು.