ಧರ್ಮಕಾರ್ಯಗಳಿಂದ ಒತ್ತಡ ದೂರ

12 ಎಸ್ಕೆಪಿ 2b
ಬಿ.ವೈ.ರಾಘವೇಂದ್ರ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆದರು.
Published on

ಶಿಕಾರಿಪುರ: ನಮ್ಮ ಆಚಾರ-ವಿಚಾರಗಳು, ಸಂಸ್ಕೃತಿ, ಸಂಸ್ಕಾರ, ಪರಂಪರೆಗಳು ಧರ್ಮೋತ್ಥಾನ ಕಾರ್ಯಕ್ಕೆ ಪೂರಕವಾಗಿವೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೈವ ಚಿಂತನೆಗಳಿಂದ ನಮ್ಮ ಮನಸಿನ ಕಲ್ಮಷ ಕಳೆದು ನಾವು ನಿರ್ಮಲರಾಗುತ್ತೇವೆ. ಈ ಮಣ್ಣಿನ ಕಣ ಕಣದಲ್ಲಿಯೂ ಋಷಿ-ಮುನಿಗಳ, ಸಾಧು-ಸಂತರ, ಶರಣರ ಸತ್ಪುರುಷರ ತತ್ವಪದ, ಸದ್ವಿಚಾರಗಳ ಧಾರೆ ಹರಿದಿದೆ. ಭಾರತವೆಂದರೆ ಅದು ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ನಿಂತಿರುವ ದೈವ ಭೂಮಿ. ಈ ಕಾರಣದಿಂದ ಜಗತ್ತು ಭಾರತವನ್ನು ಉನ್ನತ ಸ್ಥಾನದಲ್ಲಿಟ್ಟು ಗೌರವಿಸುತ್ತಿದೆ ಎಂದರು.
ಪಟ್ಟಣದ ಹೃದಯಭಾಗದಲ್ಲಿರುವ ಶ್ರೀ ಮಾರಿಕಾಂಬಾ ದೇವಿ ಅತ್ಯಂತ ಜಾಗೃತಳಾಗಿದ್ದಾಳೆ. ಅವಳ ಅನುಗ್ರಹದಿಂದ ಭಕ್ತರು ಸುಖ ಸಮೃದ್ಧಿ ಹೊಂದುತ್ತಾರೆ. ದೇವಸ್ಥಾನದ ಸಮಿತಿ ಕಾರ್ಯ ಅಭಿನಂದನೀಯ. ಇಲ್ಲಿ ದಾಸೋಹದ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ದೇವಸ್ಥಾನಗಳು, ಮಠ-ಮಂದಿರಗಳು ನಮ್ಮ ನಾಡಿನ ಶ್ರದ್ಧಾಕೇಂದ್ರಗಳಾಗಿವೆ. ಧರ್ಮಕಾರ್ಯಗಳಿಂದ ಸದಾ ಒಂದಿಲ್ಲೊಂದು ಒತ್ತಡದಲ್ಲಿರುವ ನಮಗೆ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.
ಸಮಿತಿಯ ಪದಾಧಿಕಾರಿಗಳಾದ ಭದ್ರಾಪುರ ಹಾಲಪ್ಪ, ಪಾರಿವಾಳದ ಶಿವಶಂಕರಪ್ಪ , ಪರಮೇಶ್ವರಪ್ಪ, ರಾಜಪ್ಪ, ಶಿವನಗೌಡ, ಅಡಕೆ ಮಲ್ಲೇಶ್, ರಮೇಶ್, ಪ್ರಶಾಂತ್, ರಾಜಪ್ಪ, ಪ್ರಶಾಂತ್ ಜೀನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net