ಹಬ್ಬಗಳ ಆಚರಣೆಯಿಂದ ಬಾಂಧವ್ಯ ವೃದ್ಧಿ

ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಬಕ್ರೀದ್ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾತನಾಡಿದರು. ಸಿಪಿಐ ಆರ್.ಪ್ರಹ್ಲಾದ್ ಚನ್ನಗಿರಿ, ಪಿಎಸ್‌ಐ ಸಿ.ಪ್ರಕಾಶ್, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ಶುಕೂರ್ ಇದ್ದರು.

Published on

ಕೂಡ್ಲಿಗಿ: ವಿವಿಧತೆಯಲ್ಲಿ ಏಕತೆ ಸಾರುವ ಭಾರತದಲ್ಲಿ ಎಲ್ಲ ಧರ್ಮಗಳ ಸಾರವೇ ಶಾಂತಿ ಹಾಗೂ ಸಹಬಾಳ್ವೆಯಾಗಿದೆ ಎಂದು ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಕ್ರೀದ್ ಶಾಂತಿ ಸಭೆಯಲ್ಲಿ ಮಾತನಾಡಿದರು. ಧರ್ಮಗಳ ಆಚರಣೆ ಬೇರೆ ಆಗಿರಬಹುದು. ಆದರೆ, ಸ್ನೇಹ, ಸೌಹಾರ್ದತೆ ಹಾಗೂ ಭಾವೈಕ್ಯ ಸಂದೇಶವನ್ನು ಸಾರುತ್ತವೆ. ಹಬ್ಬಗಳ ಆಚರಣೆಯಿಂದ ಬಾಂಧವ್ಯ ವೃದ್ಧಿ ಆಗಲಿದೆ ಎಂದರು.

ಮೌಲ್ವಿಗಳಾದ ಅಖಿಲ್ ಅಹಮದ್, ಮೌಲಾನ ಅನ್ವರ್, ಡಿ.ಜಿ.ಶಬ್ಬೀರ್, ಮಹಮದ್ ಜಿಲಾನ್, ಬಿ.ರೆಹಮಾನ್, ಅಬ್ದುಲ್ ಬಾರಿ, ಅಬ್ದುಲ್, ಮುನ್ನ, ರಹಿಮಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net