

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರದ ಅವಶ್ಯಕತೆ ಪೂರೈಸಲು ಕೃಷಿ ಶಿಕ್ಷಣ ಮತ್ತು ಸಂಶೋಧನೆಯನ್ನು ಪುರ‍್ರಚಿಸುವ ಅಗತ್ಯವಿದೆ. ಶಾಲೆಗಳಲ್ಲಿ ಕೃಷಿ ವಿಷಯಗಳ ಪರಿಚಯ, ಕೃಷಿ ಕಾಲೇಜುಗಳನ್ನು ಬಲಪಡಿಸುವುದು, ಪದವಿ ಕೋರ್ಸ್ಗಳ ಪಠ್ಯಕ್ರಮವನ್ನು ಪುರ‍್ರಚಿಸಬೇಕು ಎಂದು ಮಹಾರಾಷ್ಟç ಅಕೋಲಾದ ಡಾ. ಪಂಜಾಬರಾವ್ ದೇಶಮುಖ ಕೃಷಿ ವಿದ್ಯಾಪೀಠದ ನಿವೃತ್ತ ಕುಲಪತಿ ಡಾ. ಮಧುಕುಮಾರ ಭಾಲೆ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್.ವಿ. ಪಾಟೀಲ ಪ್ರತಿಷ್ಠಾನ ಹಾಗೂ ಸಂಶೋಧನೆ, ತರಬೇತಿ ಮತ್ತು ರೈತರ ಶ್ರೇಯೋಭಿವೃದ್ಧಿ ಪೀಠದ 3ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿಯ ಶಿಫಾರಸಿನ ಆಧಾರದ ಮೇಲೆ ರೈತರಿಗಾಗಿ ಅತ್ಯುತ್ತಮ ಕೆಲಸ ಮಾಡಿದ 2 ರೈತ ಉತ್ಪಾದಕ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಯಿತು.
ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರಾದ ಶ್ರೀನಿವಾಸ ಕೋಟ್ಯಾನ್, ಪಾರ್ವತಿ ಕುರ್ಲೆ, ರವಿಕುಮಾರ ಮಾಳಿಗೇರ, ನಿವೃತ್ತ ಕುಲಪತಿ ಡಾ. ಜೆ.ವಿ. ಗೌಡ, ಡಾ. ಎಂ.ಎನ್. ಶೀಲವಂತರ, ಡಾ. ಜೆ.ಎಚ್. ಕುಲಕರ್ಣಿ, ಅಶೋಕ ಪಾಟೀಲ, ಡಾ. ಶೀಲಾ ಎಸ್. ಪಾಟೀಲ ಹಾಗೂ ಪ್ರಾಧ್ಯಾಪಕರಿದ್ದರು.
ಡಾ. ಸುರೇಖಾ ಸಂಕನಗೌಡರ ನಿರೂಪಿಸಿದರು. ಡಾ. ಶ್ರೀದೇವಿ ಸ್ವಾಗತಿಸಿದರು. ವಿ.ಎಸ್. ಕುಬಸದ ವಂದಿಸಿದರು.