ಬೇರುಮಟ್ಟದಲ್ಲಿ ಪಕ್ಷ ಗಟ್ಟಿಗೊಳಿಸಿ

mdl 17-1 sanmana
ಮುಧೋಳ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ತಾಲೂಕು ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಗನಗೌಡ ಕಾತರಕಿ, ಬಿಜೆಪಿ ಯುವ ಮುಖಂಡ ಅರುಣ ಕಾರಜೋಳ, ನಾರಾಯಣ ಯಡಹಳ್ಳಿ, ಉದ್ಯಮಿ ಸಂಗಮೇಶ ನಿರಾಣಿ ಇತರರಿದ್ದರು.
Published on

ಮುಧೋಳ: ಜನರ ಮೆಚ್ಚುಗೆ ಗಳಿಸಿದ ಬಿಜೆಪಿಯನ್ನು ಬೇರುಮಟ್ಟದಲ್ಲಿ ಗಟ್ಟಿಗೊಳಿಸಲು ಕಾರ್ಯರ್ಕರ್ತರು ಮುಂದಾಗಬೇಕು ಎಂದು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ ಹೇಳಿದರು.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಭಾನುವಾರ ಆಗಮಿಸಿದ್ದ ಅವರು ಹೌಸಿಂಗ್ ಕಾಲನಿಯಲ್ಲಿನ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜತೆಗೆ ಮಾತನಾಡಿದರು.

ಪಕ್ಷ ಸಂಘಟನೆ ನಮ್ಮೆಲ್ಲರ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸದಸ್ಯತ್ವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು. ಬಿಜೆಪಿ ಮುಖಂಡರು ಅವರನ್ನು ಸನ್ಮಾನಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ತಾಲೂಕು ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಗನಗೌಡ ಕಾತರಕಿ, ಬಿಜೆಪಿ ಯುವ ಮುಖಂಡ ಅರುಣ ಕಾರಜೋಳ, ಉದ್ಯಮಿ ಸಂಗಮೇಶ ನಿರಾಣಿ, ಪಕ್ಷದ ಹಿರಿಯರಾದ ಆರ್.ಟಿ. ಪಾಟೀಲ, ಕೆ. ಆರ್. ಮಾಚಪ್ಪನವರ, ಹನುಮಂತ ತುಳಸಿಗೇರಿ, ನಾರಾಯಣ(ರಾಜು) ಯಡಹಳ್ಳಿ, ವಿವೇಕಾನಂದ ಪಾಟೀಲ, ಕಲ್ಲಪ್ಪ ಸಬರದ, ನಾಗಪ್ಪ ಅಂಬಿ, ಶ್ರೀಶೈಲ ಚಿನ್ನನವರ, ಶ್ರೀಕಾಂತ ಗುಜ್ಜನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net