ಕಾನೂನು ವಿಭಾಗದ ಸಂಘಟನೆ ಬಲಪಡಿಸಿ

ಕಾನೂನು ವಿಭಾಗದ ಸಂಘಟನೆ ಬಲಪಡಿಸಿ
Published on

ಹಾಸನ: ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾನೂನು ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದ ನಾಯಕರಹಳ್ಳಿ ಜಯರಾಮ್ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಗುರುವಾರ ನಡೆಯಿತು.

ನೂತನ ಜಿಲ್ಲಾಧ್ಯಕ್ಷರಾಗಿ ನಾಯಕರಹಳ್ಳಿ ಜಯರಾಮ್, ಉಪಾಧ್ಯಕ್ಷರಾಗಿ ವಿಜಯಕುಮಾರ್, ಎಂ.ಡಿ.ಮಂಜು, ಕೆ.ಎಸ್.ಹರೀಶ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪ್ರಸನ್ನ, ಖಜಾಂಚಿಯಾಗಿ ಮೊಹಮ್ಮದ್ ಆರಿಫ್ ಹಾಗೂ ಜಂಟಿ ಕಾರ್ಯದರ್ಶಿಗಳಾಗಿ ಇಮ್ರಾನ್ ಪಾಷಾ, ಲಕ್ಷ್ಮಣ, ಯೋಗೇಶ್ ಗೌರವ್ ಮತ್ತು ಮೋಹನ್‌ಕುಮಾರ್ ಪದಗ್ರಹಣ ಮಾಡಿದರು.

ಕೆಪಿಸಿಸಿ ರಾಜ್ಯ ಕಾನೂನು ವಿಭಾಗದ ಅಧ್ಯಕ್ಷ ಸಿ.ಎಂ. ಧನಂಜಯ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಕಾನೂನು ವಿಭಾಗದ ಸಂಘಟನೆಯನ್ನು ಬಲಪಡಿಸಿ, ವಕೀಲರ ನಡುವೆ ರಾಜಕೀಯ ಜಾಗೃತಿಯನ್ನು ಮೂಡಿಸುವತ್ತ ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಲೋಕೇಶ್ ಕುಮಾರ್ ಮಾತನಾಡಿ, ರಾಹುಲ್ ಗಾಂಧೀಜಿ ಅವರ ದೃಷ್ಟಿಯಲ್ಲಿ ‘ಅಡ್ವೋಕೇಟ್ ಬ್ಯಾಂಕ್’ ಎಂಬ ಹೊಸ ಆಲೋಚನೆ ಅಳವಡಿಸಬೇಕು. ಇದು ಮತದಾರರ ಬ್ಯಾಂಕ್ ಮತ್ತು ರಕ್ತದಾನ ಬ್ಯಾಂಕ್‌ನಂತೆಯೇ ಜನರ ಹಕ್ಕು ರಕ್ಷಣೆಗೆ ನಿಂತು ಸಂವಿಧಾನವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.

ಹುಡಾ ಅಧ್ಯಕ್ಷ ಪಟೇಲ್ ಶಿವಣ್ಣ ಮಾತನಾಡಿ, ಪಕ್ಷ ಈಗ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಸಂಘಟನೆಯನ್ನು ಬಲಪಡಿಸಿ, ಹೆಚ್ಚು ವಕೀಲರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ನಡೆಯಬೇಕೆಂದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಕಾನೂನು ವಿಭಾಗದ ಕಾರ್ಯಾಧ್ಯಕ್ಷ ಶ್ರೀನಿವಾಸ್ ಬಾಬು ಮಾತನಾಡಿ, ಸಂವಿಧಾನದ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ವಕೀಲರು ತಮ್ಮ ಕೆಲಸದ ಮೂಲಕ ಕಾಪಾಡಬೇಕು ಎಂದರು.

ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಹೆಚ್.ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ರಾಜ್ಯ ಜಂಟಿ ಕಾರ್ಯದರ್ಶಿ ಖಾಲಂದರ್ ಕೊಯ್ಲ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇ ಗೌಡ, ಜಿಗಣಿ ಕೃಷ್ಣಪ್ಪ, ಎಸ್.ಸಿ. ಘಟಕದ ಮಾಜಿ ಅಧ್ಯಕ್ಷ ಡಾ.ಮುನಿಸ್ವಾಮಿ, ಮಲ್ಲಿಗೆವಾಳು ದೇವಪ್ಪ, ಡಿ.ಟಿ. ಪ್ರಸನ್ನ, ಜಿ.ಎಸ್.ವಿಶ್ವನಾಥ ಎಚ್.ಆರ್. ಒಂಬೆಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net