

ವಿಜಯಪುರ : ಪಟ್ಟಣದ ಬೀದಿಬದಿ ವ್ಯಾಪಾರಿಗಳು ಏ.1ರಿಂದ ಯಾರಿಗೂ ಸುಂಕ ಕಟ್ಟುವಂತಿಲ್ಲ ಎಂದು ಪುರಸಭೆ ಅಧ್ಯೆ ಎಸ್.ಭವ್ಯಾಮಹೇಶ್ ಹೇಳಿದರು.
ಪುರಸಭೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪುರಸಭೆ ಮಾಲೀಕತ್ವದ ಬಸ್ ಸ್ಟಾ$್ಯಂಡ್ ಶುಲ್ಕ ವಸೂಲಿ, ವಾರದ ಸಂತೆ ಶುಲ್ಕ ವಸೂಲಿ, ಮರಳು, ಎಂ.ಸ್ಯಾಂಡ್, ಕಲ್ಲು ಮಾರಾಟ ಮಾಡುವ ವಾಹನಗಳ ಶುಲ್ಕ ವಸೂಲಾತಿ ಹರಾಜು ಪ್ರಕ್ರಿಯೆಯಲ್ಲಿ ಅವರು, ದಿನವಹಿ ಮಾರುಕಟ್ಟೆ ಶುಲ್ಕ ವಸೂಲಿ ಹರಾಜು ಕೈ ಬಿಟ್ಟಿದ್ದು, ಬೀದಿಬದಿ ವ್ಯಾಪಾರಿಗಳು ಯಾರೂ ಸುಂಕ ಕಟ್ಟದಂತೆ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಮಾತನಾಡಿ, ಈ ಹಿಂದೆ ಪುರಸಭೆ ಆವರಣದಲ್ಲಿ ಹರಾಜಾಗಿದ್ದ ದಿನವಹಿ ಸುಂಕ ವಸೂಲಾತಿ ಹರಾಜನ್ನು ಈ ಬಾರಿ ನಿಲ್ಲಿಸಲಾಗಿದೆ. ನಾವು ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚಿನ ಸುಂಕ ವಸೂಲಿ ಮಾಡುತ್ತಿದ್ದಾರೆ ಎನ್ನುವ ದೂರು ಕೇಳಿ ಬಂದಿದ್ದವು. ಪ್ರಸ್ತುತ, ಹರಾಜಾಗಿರುವ ಬಸ್ ಸ್ಟಾ$್ಯಂಡ್, ವಾರದ ಸಂತೆ, ಎಂ.ಸ್ಯಾಂಡ್ ಕಲ್ಲು ಮಾರಾಟ ಮಾಡುವ ವಾಹನಗಳ ಸುಂಕ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿಗೆ ಪಡೆಯಬಾರದು. ಪಡೆದರೆ ಹರಾಜು ಗುತ್ತಿಗೆ ರದ್ದುಪಡಿಸಿ, ಹರಾಜು ಮೊತ್ತ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರೂ ನಿಗದಿತ ದರಕ್ಕಿಂತ ಹೆಚ್ಚು ನೀಡಬಾರದು ಎಂದು ಹೇಳಿದರು. ಪುರಸಭೆ ಉಪಾಧ್ಯೆ ತಾಜುನ್ನಿಸಾ ಮಹಬೂಬ್ ಪಾಷ, ಸದಸ್ಯರಾದ ಸಿ.ನಾರಾಯಣಸ್ವಾಮಿ, ವಿ.ನಂದಕುಮಾರ್, ಎಂ.ನಾರಾಯಣಸ್ವಾಮಿ, ಎಂ.ರಾಜಣ್ಣ, ಹನೀಪುಲ್ಲಾ, ಶ್ರೀರಾಮಪ್ಪ, ಸೈಯದ್ ಎಕ್ಬಾಲ್, ಶಿಲ್ಪಾ ಅಜಿತ್, ಕಂದಾಯ ಅಧಿಕಾರಿ ಚಂದ್ರು, ಸಿಬ್ಬಂದಿಗಳಾದ ಅನಿಲ್, ಜನಾರ್ಧನ, ಮಂಜುನಾಥ್ ಇತರರು ಇದ್ದರು.