

ಕೆ.ಆರ್.ಸಾಗರ: ಇಲ್ಲಿನ ಬೃಂದಾವನ ಪ್ರವೇಶ ದ್ವಾರದ ಬಳಿ ಇರುವ ಕಾವೇರಿ ಮಾತೆಯ ಪ್ರತಿಮೆಗೆ ಸರ್ ಎಂ.ವಿಶ್ವೇಶ್ವರಯ್ಯ ರಸ್ತೆ ಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಹಾಲಿನ ಅಭಿಷೇಕ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕ ಪ್ರಸನ್ನಕುಮಾರ್ ನೇತೃತ್ವದ ತಂಡದಿಂದ ಪೂಜಾ ಕೈಂಕರ್ಯ ನಡೆಸಲಾಯಿತು.
101 ಲೀಟರ್ ಹಾಲಿನ ಅಭಿಷೇಕ, ಮೊಸರು, ಪಂಚಾಮೃತ ಅಭಿಷೇಕ ಮಾಡಲಾಯಿತು. ನಂತರ ಕಾವೇರಿ ಮಾತೆಯನ್ನು ಹೂಗಳಿಂದ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೂ ಪೂಜೆ ಸಲ್ಲಿಸಲಾಯಿತು.
ಮಾಜಿ ಶಾಸಕಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ವರುಣ ದೇವ ಶೀಘ್ರ ಕೃಪೆ ತೋರಿ ಉತ್ತಮ ಮಳೆಯಾಗಿ ರೈತರು ಮತ್ತು ಜನರಲ್ಲಿ ಸಂತಸ ಮನೆ ಮಾಡಲಿ ಎಂದು ಅವರು ಆಶಿಸಿದರು.
ಕೆ.ಆರ್.ಸಾಗರ ಗ್ರಾಪಂ ಅಧ್ಯಕ್ಷ ಕೆ.ನರಸಿಂಹ, ಸದಸ್ಯರಾದ ಪಾಪಣ್ಣ, ದೇವರಾಜು, ರವಿಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಮಾಜಿ ಸದಸ್ಯ ವೆಂಕಟೇಶ್, ವಿ.ಮಂಜುನಾಥ, ಸರ್ ಎಂ.ವಿಶ್ವೇಶ್ವರಯ್ಯ ರಸ್ತೆಬದಿ ವ್ಯಾಪಾರಸ್ಥರ ಸಂಘದ ಸದಸ್ಯರಾದ ಪುರುಷೋತ್ತಮ್, ರವೀಶ್, ರಫೀಕ್, ಮೋಹನ, ಪ್ರಮೋದ, ಚಂದು, ಕುಮಾರ, ಮುಖಂಡರಾದ ಚಾರ್ಸಿ ಶಂಕರ, ಸಂಜು, ಸೇರಿದಂತೆ ನೂರಾರು ರಸ್ತೆ ಬದಿ ವ್ಯಾಪಾರಸ್ಥರು, ಅವರ ಕುಟುಂಬಸ್ಥರು ಹಾಜರಿದ್ದರು.