ಮಾಜಿ ಸಚಿವರ ಎದುರೇ ಬಿಜೆಪಿ ನಾಯಕರ ಬೀದಿ ರಂಪಾಟ

09-11-rama-bjp
Published on

ರಾಮನಗರ: ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಮತ್ತು ಚನ್ನಪಟ್ಟಣ ತಾಲೂಕು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಜಯರಾಮು ಮಾಜಿ ಸಚಿವರ ಸಮ್ಮುಖದಲ್ಲಿಯೇ ಪರಿಸ್ಪರ ಕೈ ಕೈ ಮಿಲಾಯಿಸಿದ ಘಟನೆ ವಿಭೂತಿಕೆರೆಯಲ್ಲಿ ನಡೆಯಿತು.

ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದ ತಂಡ ಗುರುವಾರ ಬರ ಅಧ್ಯಯನ ನಡೆಸಿ ಕಾರ್ಯಕರ್ತರ ಮನೆ ಭೇಟಿ ಮಾಡಿ ಬರುವ ವೇಳೆಯಲ್ಲಿ ಇಬ್ಬರೂ ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ಒಬ್ಬರಿಗೊಬ್ಬರು ಕೈ ಕೈ ಮಿಲಾುಸಿದ್ದಾರೆ. ಅಷ್ಟರಲ್ಲಿ ಬಿಜೆಪಿ ಮುಖಂಡರು, ಸ್ಥಳೀಯರು ಪೋಲೀಸರು ಮಧ್ಯೆ ಪ್ರವೇಶಿಸಿ ಜಗಳ ಬಿಡಿಸಿದ್ದಾರೆ.

ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರ ನೋಂದಣಿ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಈ ಘಟನೆ ನಡೆದಿದೆ.  ಈ ಘಟನೆ ಮಾಜಿ ಸಚಿವರಿಗೆ ಇರಿಸು ಮುರುಸು ತಂದಿತ್ತು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಜಯರಾಮು ನಾನು ಮಾತನಾಡುತ್ತಾ ನಿಂತಿರಬೇಕಾದರೆ ನನ್ನನ್ನು ಎಷ್ಟು ನೊಂದಣಿ ಮಾಡಿಸಿದ್ದಿ ಎಂದು ಕೇಳಿದರು. ನಾನು 25, 30 ವಯಕ್ತಿಕವಾಗಿ ಮಾಡಿಸಿದ್ದೇನೆ ಎಂದು ಹೇಳಿದೆ. ಈ ವೇಳೆ ನಿಮ್ಮಂತವರು ಏಕೆ ಅಧ್ಯಕ್ಷರು ಎಂದು ನನ್ನ ಕಪಾಳಕ್ಕೆ ಹೊಡೆದರು. ಮತ್ತೆ ಕೈ ಎತ್ತಿದರು ಈ ವೇಳೆ ನಾನು ಕೂಡ ಕೈ ಎತ್ತಿದೆ ಎಂದರು. ಈ ಸಂಬಂಧ ರಾಜ್ಯ ನಾಯಕರಿಗೆ ದೂರು ನೀಡುತ್ತೇನೆ. ನನಗೆ ನ್ಯಾಯ ದೊರೆಯಲಿದೆ ಎನ್ನುವ ವಿಶ್ವಾಸವಿದೆ ಎಂದರು.

ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕೋಟಾ ಶ್ರೀನಿವಾಸ ಪೂಜಾರಿ, ನಾವು ಧನಿ ಏರಿಸಿ ಮಾತಡಾವುದೇ ಗಲಾಟೆ ಎಂದರೆ ಹೇಗೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net