ಬೀದಿ ನಾಟಕಗಳು ಜಾಗೃತಿ ಮೂಡಿಸಲು ಸಹಕಾರಿ

5ANKOLA1
Published on

ಅಂಕೋಲಾ: ಅಂಗವಿಕಲರ ಸಬಲೀಕರಣಕ್ಕಾಗಿ ಬೀದಿ ನಾಟಕಗಳು ಒಂದು ಪ್ರಬಲ ಸಾಧನವಾಗಿವೆ. ಇವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ತಾರತಮ್ಯವನ್ನು ಹೋಗಲಾಡಿಸಲು ಮತ್ತು ಅಂಗವಿಕಲರ ಹಕ್ಕುಗಳ ಬಗ್ಗೆ ಅರಿವು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ಬಿಇಒ ಮಂಗಳಲಕ್ಷ್ಮೀ ಪಾಟೀಲ ಹೇಳಿದರು.

ತಾಲೂಕಿನ ಭಾವಿಕೇರಿ ಗ್ರಾಪಂ ವ್ಯಾಪ್ತಿಯ ಬಡಗೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶೇಷ ಚೇತನ ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.

ಭಾವಿಕೇರಿ ಗ್ರಾಪಂ ಅಧ್ಯಕ್ಷೆ ದೀಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಉದಯ ವಿ.ನಾಯಕ, ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಾಲಚಂದ್ರ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ, ಕಾರ್ಯದರ್ಶಿ ರಾಜು ನಾಯಕ, ಉಪಾಧ್ಯಕ್ಷೆ ಭಾರತಿ ನಾಯಕ, ಸಿ.ಆರ್.ಪಿ ರಾಮಾನಾಥ ನಾಯ್ಕ, ಜ್ಯೋತಿ ನಾಯ್ಕ ಹಾಗೂ ಶಿಕ್ಷಕರಾದ ರಾಯ ನಾಯ್ಕ, ಆನಂದು ನಾಯ್ಕ, ಸಿ.ಡಿ.ಗಾಂವಕರ, ವೀಣಾ ಹೆಗಡೆ, ಸುಜಾತಾ ರೇವಣಕರ್, ಸೃಜನಾ ನಾಯಕ, ಶೋಭಾ ನಾಯಕ ಇದ್ದರು. ಮುಖ್ಯಾಧ್ಯಾಪಕಿ ಅನಿತಾ ಕೇಣಿ, ರಾಜೇಶ ನಾಯಕ ಸೂರ್ವೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net