ಸ್ವಚ್ಛತೆಯಿಂದ ಆರೋಗ್ಯ ಕಾಪಾಡಿಕೊಳ್ಳಿ

dj mlk beti
Published on

ಮೊಳಕಾಲ್ಮೂರು: ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ಸಿಟಿ ರೌಂಡ್ಸ್‌ಗೆ ಮುಂದಾದ ತಹಸೀಲ್ದಾರ್ ಎಂ.ವಿ.ರೂಪಾ, ಎಲ್ಲೆಂದರಲ್ಲಿ ಕಸ ಬಿದ್ದಿರುವುದನ್ನು ಗಮನಿಸಿ, ಬೀದಿ ವ್ಯಾಪಾರಿಗಳು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ.

ಮನಸೋ ಇಚ್ಛೆ ಕಸ ಹಾಕಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೊಳೆತ ಹಣ್ಣುಗಳನ್ನ ಮಾರಾಟ ಮಾಡಬಾರದು. ನೊಣ ಕೂರದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಕಾಫಿ, ಟೀ ಕುಡಿದ ಲೋಟಗಳನ್ನು ಬುಟ್ಟಿಯಲ್ಲಿ ಹಾಕಬೇಕು.

ಆದಷ್ಟು ಬಿಸಿ ನೀರು ಬಳಕೆಗೆ ಆದ್ಯತೆ ಕೊಡಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಇದನ್ನು ಮೀರಿ ಬಳಕೆ ಮಾಡಿರುವುದು ಕಂಡು ಬಂದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದರು.

ಬಸ್ ನಿಲ್ದಾಣದಲ್ಲಿ ಇರುವ ಡಬ್ಬಾ ಅಂಗಡಿಗಳನ್ನು ಕಾಯಂ ಆಗಿ ಇಲ್ಲೇ ನಿಲ್ಲಸಬಾರದು. ವ್ಯಾಪಾರ ಮುಗಿದ ತಕ್ಷಣ ಮನೆ ಹತ್ತಿರ ಕೊಂಡೊಯ್ಯಬೇಕು.

ಇದರಿಂದ ಸಾರ್ವಜನಿಕರು ಹಾಗೂ ಬಸ್, ಆಟೋಗಳಿಗೆ ಆಗುವ ತೊಂದರೆ ತಪ್ಪಲಿದೆ. ಸಿಹಿ ತಿಂಡಿ ಅಥವಾ ಇನ್ಯಾವುದೆ ಆಹಾರದಲ್ಲಿ ಗುಣಮಟ್ಟ ಹಾಗೂ ಸುರಕ್ಷತೆ ಕಾಪಾಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net