

24 ಗಂಟೆ ಒಳಗಾಗಿ ಉತ್ತರಿಸಿದಿದ್ದರೆ ಕೆಸಿಎಸ್ ನಿಯಮಗಳ ಪ್ರಕಾರ ಅಗತ್ಯ ಶಿಸ್ತು ಕ್ರಮ ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಡಳಿತ
ಶಿವಾನಂದ ಹಿರೇಮಠ ಗದಗ
ಬೀದಿ ದೀಪ ನಿರ್ವಹಣೆ ಗುತ್ತಿಗೆ ಆರ್ಥಿಕ ಬಿಡ್ ತೆರೆಯುವ ಪೂರ್ವದಲ್ಲೇ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಮಂಡಿಸಿ ಗುತ್ತಿಗೆ ದರಕ್ಕೆ ನಗರಸಭೆ ಅನುಮೋದನೆ ನೀಡಿದನ್ನು ಜಿಲ್ಲಾಡಳಿತ ಪತ್ತೆ ಹಚ್ಚಿದೆ. ಗುತ್ತಿಗೆಯಲ್ಲಿ ನಡೆದ ಅಕ್ರಮ ಕುರಿತು ವಿಜಯವಾಣಿ ದಿನಪತ್ರಿಕೆ ನಿರಂತರ ವರದಿ ಬಿತ್ತರಿಸುತ್ತಿದ್ದಂತೆ, ಬೀದಿ ದೀಪ ನಿರ್ವಹಣೆ ಗುತ್ತಿಗೆ ನೀಡಿರುವ ದಾಖಲೆಗಳನ್ನು ಸಂಪೂರ್ಣ ಜಾಲಾಡಿರುವ ಜಿಲ್ಲಾಡಳಿತಕ್ಕೆ ಗುತ್ತಿಗೆ ಪ್ರಕ್ರಿಯೆಯಲ್ಲಿ ನಡೆದಿರುವ ಲೋಪದೋಷಗಳ ಸಂಪೂರ್ಣ ಮಾಹಿತಿ ಕಲೆ ಹಾಕಿದೆ. ಪೌರಸಭೆ ಅಧಿನಿಯಮ 1964ರ ಉಲ್ಲಂಘನೆ ಆಗಿರುವುದು ಕಂಡು ಬಂದಿದ್ದು ನಗರಸಭೆ ಪೌರಾಯುಕ್ತ ಗಂಗಪ್ಪ ಎಂ ಹಾಗೂ ಕಾರ್ಯಪಾಲಕ ಅಭಿಯಂತರ ಎಚ್. ಬಂಡಿವಡ್ಡರ ಅವರಿಗೆ ಕಾರಣ ಕೇಳಿ ನೋಟೀಸ್ ನೀಡುವುದರ ಮೂಲಕ ಚಾಟಿ ಬೀಸಿದೆ. ನೋಟಿಸ್ಗೆ 24 ಗಂಟೆ ಒಳಗಾಗಿ ಸೂಕ್ತ ಉತ್ತರ ನೀಡಿದಿದ್ದರೆ ಕೆಸಿಎಸ್ ನಿಯಮಗಳ ಪ್ರಕಾರ ಅಗತ್ಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ನೋಟೀಸ್ ನಲ್ಲಿ ಏನಿದೆ?
ಏನಿದು ಪ್ರಕರಣ?
ಜಿಲ್ಲಾಧಿಕಾರಿಗಳ ಅನುಮೋದನೆ ಇಲ್ಲದೇ 1 ಕೋಟಿಗೂ ಅಧಿಕ ಮೊತ್ತಕ್ಕೆ ಬೀದಿ ದೀಪಗಳ ನಿರ್ವಹಣೆಗೆ ಟೆಂಡರ್ ನೀಡಿದ್ದಲ್ಲದೇ, ತಾಂತ್ರಿಕ ಮಂಜೂರಾತಿಯನ್ನು 98 ಲಕ್ಷ ರೂ. ಗೆ ಪಡೆದು 1.37 ಕೋಟಿ ರೂ.ಗೆ ವಾಷಿರ್ಕ ನಿರ್ವಹಣೆಗೆ ಕಾರ್ಯಾನುದೇಶ ನೀಡಿರುವ ಪ್ರಕರಣ ಇದಾಗಿದೆ. ಇದರಿಂದ ನಗರಸಭೆಗೆ ಆರ್ಥಿಕ ಹೊರೆ ಆಗುವುದಲ್ಲದೇ ನಗರಸಭೆ ಅಧಿಕಾರಿಗಳ ಕರ್ತವ್ಯ ಲೋಪವು ಬೆಳಕಿಗೆ ಬಂದಿದೆ.